ಶಾಲೆಯಲ್ಲಿ ಗುರುತಿನ ಕಾರ್ಡ್ ವಿತರಣೆ

11-id card
Published on

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಬಾಳ್ತಿಲ ಗ್ರಾಮದ ಕಂಠಿಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಗುರುತಿನ ಕಾರ್ಡ್ ವಿತರಣೆ ಮಾಡಲಾಯಿತು.

ಕಲ್ಲಡ್ಕ ಶೌರ್ಯ ತಂಡದ ಅಧ್ಯಕ್ಷ ಮಾಧವ ಸಾಲಿಯನ್ ಕುದ್ರೆಬೆಟ್ಟು, ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ, ತಂಡದ ಸಂಯೋಜಕಿ ವಿದ್ಯಾ, ಸದಸ್ಯರಾದ ಸೌಮ್ಯ, ಚಿನ್ನಾ ಕಲ್ಲಡ್ಕ, ಶಾಲಾ ಮುಖ್ಯ ಶಿಕ್ಷಕಿ ಚೇತನ ಕುಮಾರಿ, ಶಿಕ್ಷಕಿಯರಾದ ಮೋನಿಷಾ, ಜಯಂತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net