

ಗುರುಪುರ: ಲಯನ್ಸ್ ಜಿಲ್ಲಾ ಗವರ್ನರ್ ಲ.ಕುಡ್ಪಿ ಅರವಿಂದ ಶೆಣೈ ಅವರ ಆಶಯದಂತೆ ಗುರುಪುರದಲ್ಲಿ ಶನಿವಾರ ಆಯೋಜಿಸಲಾದ ಸರಳ ಸಮಾರಂಭದಲ್ಲಿ ಕ್ಲಬ್‌ನ ಜಿಲ್ಲಾ ಸೇವಾ ಪ್ರಧಾನ ಸಂಯೋಜಕ ರಮಾನಂದ ನೂಜಿಪ್ಪಾಡಿ ಲಾನುಭವಿ 5 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.
ಗುರುಪುರ-ಕೈಕಂಬ ಲಯನ್ಸ್ ವಲಯಾಧ್ಯಕ್ಷ ಮೆಲ್ವಿನ್ ಸಲ್ಡಾನ ಅಧ್ಯಕ್ಷತೆ ವಹಿಸಿದ್ದರು. ಲ.ಮಹೇಶ್ ಶೆಟ್ಟಿ ಪ್ರಸ್ತಾವಿಸಿದರು. ಎಲ್‌ಸಿಐಎ್ ಸಂಯೋಜಕ ವೆಂಕಟೇಶ್ ಹೆಬ್ಬಾರ್, ಜಿಲ್ಲಾ ಕಾರ್ಯಕ್ರಮಗಳ ಸಂಯೋಜಕ ಓಸ್ವಾಲ್ಡ್ ಡಿಸೋಜ, ಗುರುಪುರ-ಕೈಕಂಬ ಎಂಜೆಎ್ ಜೇಸನ್ ಪ್ಯಾರಿಸ್, ಸೇವಾ ಸಂಯೋಜಕ ಜೆಪ್ರಿಯನ್ ತಾವ್ರೊ, ಬಪ್ಪನಾಡು, ಮುಚ್ಚೂರು(ನೀರುಡೆ), ವೇಣೂರು ಮತ್ತು ಗುರುಪುರ-ಕೈಕಂಬ ವಲಯ ಕ್ಲಬ್‌ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೇರಿ ಡಿಸೋಜ, ವಾರಿಜಾ, ಶಕುಂತಲಾ, ಆಜ್ರಮ್ಮ, ಸಿದ್ದಿಕ್ ಕಂದಾವರ ಲಯನ್ಸ್ ಆಹಾರ ಕಿಟ್ ಸ್ವೀಕರಿಸಿದರು. ಬಳಿಕ ಲಯನ್ಸ್ ಕಾರ್ಯಕಾರಿಣಿ ಸಭೆ ನಡೆಯಿತು.