ಸೂಳಬೆಟ್ಟು ಶಾಲೆಯಲ್ಲಿ ಪರಿಕರ ವಿತರಣೆ

New Project (2)
Published on

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಭಾರತೀಯ ದಂತ ವೈದ್ಯಕೀಯ ಸಂಘ(ಐ.ಡಿ.ಎ.)ದ ಸಹಯೋಗದಲ್ಲಿ ಡೋಂಗ್ರೇ ಕುಟುಂಬಸ್ಥರು ಕೊಡಮಾಡುವ ಶೈಕ್ಷಣಿಕ ಪರಿಕರಗಳ ವಿತರಣೆ ನಾಲ್ಕೂರು ಗ್ರಾಮದ ಸೂಳಬೆಟ್ಟು ಸ.ಕಿ.ಪ್ರಾ.ಶಾಲೆಯಲ್ಲಿ ಸೋಮವಾರ ನಡೆಯಿತು.

ರೋಟರಿ ನಿಯೋಜಿತ ಅಧ್ಯಕ್ಷ ಪ್ರೊ.ಪಿ.ಪಿ.ಪ್ರಭು ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಪ್ರವೀಣ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪುಸ್ತಕ, ಚೀಲ, ಕೊಡೆ ಮತ್ತಿತರ ಪರಿಕರಗಳನ್ನು ವಿತರಿಸಲಾಯಿತು. ಈ ಬಾರಿಯ ಜೆ.ಇ.ಇ.(ಅಡ್ವಾನ್ಸ್) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಪಡೆದು ಐ.ಐ.ಟಿ.ಗೆ ಆಯ್ಕೆಯಾದ ಅಳದಂಗಡಿಯ ಅಚಿಂತ್ಯ ದಾಸ್ ಅವರಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾನಿಧಿಯಾಗಿ 25 ಸಾವಿರ ರೂ. ಡಾ.ಶಶಿಧರ ಡೋಂಗ್ರೆ ಹಸ್ತಾಂತರಿಸಿದರು. ಐ.ಡಿ.ಎ.ಪುತ್ತೂರು ಘಟಕ ಅಧ್ಯಕ್ಷೆ ಡಾ.ಆಶಾ ಪಿದಮಲೆ, ಬೆಳ್ತಂಗಡಿ ಸ್ವಾತಿ ದಂತ ಚಿಕಿತ್ಸಾಲಯದ ಡಾ.ಶಶಿಧರ ಡೋಂಗ್ರೆ, ಬಳಂಜ ಗ್ರಾಪಂ ಮಾಜಿ ಅಧ್ಯಕ್ಷ ವಿಶ್ವನಾಥ ಡೋಂಗ್ರೆ, ಡಾ.ರಾಘವೇಂದ್ರ ಪಿದಮಲೆ, ಗೀತಾಪ್ರಭು, ಡಾ.ಸುಷ್ಮಾ ಡೋಂಗ್ರೆ, ಮೋಹನದಾಸ್ ಅಳದಂಗಡಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಲೀನಾ ಮೋರಾಸ್ ಸ್ವಾಗತಿಸಿದರು. ಸಹ ಶಿಕ್ಷಕಿ ರೀಟಾ ರೋಡ್ರಿಗಸ್ ವಂದಿಸಿದರು. ಹಿರಿಯ ವಿದ್ಯಾರ್ಥಿ ದೀಕ್ ಆಠವಳೆ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಶಶಿಕಲಾ, ಅಕ್ಷರ ದಾಸೋಹದ ಲವೀನಾ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net