

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಬಿಳಿನೆಲೆ ವಲಯದಲ್ಲಿ ಲಾಭಾಂಶ ವಿತರಣೆ ಪ್ರಕ್ರಿಯೆಗೆ ನಡೆಯಿತು.
ಯೋಜನೆ ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿ, ಬಿಳಿನೆಲೆ ವಲಯದಲ್ಲಿ 360 ಸಂಘಗಳಿದ್ದು, ಸಂಘಗಳ ಗುಣಮಟ್ಟದ ಆರ್ಥಿಕ ವ್ಯವಹಾರದ ಆಧಾರದ ಮೇಲೆ ಸಂಘಗಳ ಸದಸ್ಯರುಗಳಿಗೆ ಲಾಭಾಂಶ ನೀಡಲಾಗುತ್ತಿದೆ. ಲಾಭಾಂಶದ ಹಣ ಉತ್ತಮ ಉದ್ದೇಶಕ್ಕೆ ವಿನಿಯೋಗಿಸಿ ಸದುಪಯೋಗಪಡಿಸಿಕೊಳ್ಳಿ ಎಂದರು.
ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ, ಬಿಳಿನೆಲೆ ವಲಯಾಧ್ಯಕ್ಷ ಸಂತೋಷ್ ಕೇನ್ಯ, ಸೇವಾಪ್ರತಿನಿಧಿ ರೇಖಾ, ಧತ್ತ ನಿಧಿ ಸಂಘದ ಸದಸ್ಯರುಗಳಾದ ಕೊರಗಪ್ಪ ಗೌಡ, ವೆಂಕಪ್ಪ ಗೌಡ ಕೋಕಳ, ಉಮೇಶ್ ಕೊಕಳ, ಪ್ರಶಾಂತ್ ಕುಮಾರ್ ಮತ್ತು ರಂಜೀತ್ ಕೊಕಳ ಉಪಸ್ಥಿತರಿದ್ದರು.