ಅಸಂಘಟಿತ ಕಾರ್ಮಿಕರಿಗೆ ಕಾರ್ಡ್ ವಿತರಣೆ

ಅಸಂಘಟಿತ ಕಾರ್ಮಿಕರಿಗೆ ಕಾರ್ಡ್ ವಿತರಣೆ
Published on

ನಂಜನಗೂಡು: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಆಟೋ ಚಾಲಕರಿಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ನಂಜನಗೂಡಿನ ಶ್ರೀ ಶನೇಶ್ವರ ಗೂಡ್ಸ್ ಸರಕು ಸಾಗಣೆ ಆಟೋ ಚಾಲಕರ ಸಂಘದ ಚಾಲಕರಿಗೆ ಸೋಮವಾರ ಎಪಿಎಂಸಿ ಆವರಣದಲ್ಲಿ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಕಾರ್ಡ್ ವಿತರಣೆ ಮಾಡಿದರು.

ರಾಜ್ಯ ಸರ್ಕಾರವು ಸ್ಥಾಪಿಸಿರುವ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ನಂಜನಗೂಡಿನಲ್ಲಿ ಗುರುತಿನ ಚೀಟಿಯನ್ನು ವಿತರಣೆ ಮಾಡಿದ್ದೇವೆ. ಅಪಘಾತಗಳು ಸಂಭವಿಸಿದಾಗ ಮತ್ತು ಸರ್ಕಾರದ ವತಿಯಿಂದ ನೀಡುವ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ನಂಜನಗೂಡು ತಾಲೂಕಿನಲ್ಲಿ ಈಗಾಗಲೇ ನೂರು ಜನರಿಗೆ ಗುರುತಿನ ಚೀಟಿ ನೀಡಲಾಗಿದೆ. ಇನ್ನುಳಿದ ಆಟೋ ಚಾಲಕರು ಗುರುತಿನ ಚೀಟಿಯನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಶ್ರೀ ಶನೇಶ್ವರ ಗೂಡ್ಸ್ ಸರಕು ಸಾಗಣೆ ಆಟೋ ಚಾಲಕರ ಸಂಘದ ಅಧ್ಯಕ್ಷ ಪೈಲ್ವಾನ್ ವೇಣುಗೋಪಾಲ್ ಮಾತನಾಡಿ, ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ನಮಗೆ ಯಾವುದೇ ಭದ್ರತಾ ಸೌಲಭ್ಯಗಳು ಬರುತ್ತಿರಲಿಲ್ಲ. ಸರ್ಕಾರವು ಸ್ಥಾಪಿಸಿರುವ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಈ ಬಗ್ಗೆ 2022ರಲ್ಲಿ ಮನವಿ ಸಲ್ಲಿಸಲಾಗಿತ್ತು. ಮನವಿ ಮೇರೆಗೆ 11 ವಲಯಗಳ ಕಾರ್ಮಿಕರನ್ನು ಗುರುತಿಸಿ ಅವರಿಗೆ ಮಂಡಳಿಯಿಂದ ಗುರುತಿನ ಚೀಟಿ ನೀಡಿದ್ದು, ಇದರಿಂದ ಅನುಕೂಲಕರವಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ರವೀಂದ್ರನ್, ಪ್ರಧಾನ ಕಾರ್ಯದರ್ಶಿ ರಾಜೇಶ್, ಖಜಾಂಚಿ ರಮೇಶ್, ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕ ಸ್ವಾಮಿ, ಹರೀಶ, ಸುರೇಶ್, ರವಿ, ರಾಜೇಶ್, ಪ್ರಭು, ಶಿವಮೂರ್ತಿ, ಮಹದೇವ ನಾಯಕ, ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net