ಹೆಬ್ರಿಯ ಇಂದಿರಾನಗರ ಶಾಲೆಯಲ್ಲಿ ಪುಸ್ತಕ, ಕಲಿಕೋಪಕರಣ ವಿತರಣೆ

book distribution
ಮಕ್ಕಳಿಗೆ ಕಲಿಕೋಪಕರಣ ಹಾಗೂ ಪುಸ್ತಕ ವಿತರಣೆ
Published on

ಹೆಬ್ರಿ: ಗ್ರಾಮ ಪಂಚಾಯಿತಿ ಹಾಗೂ ದಾನಿಗಳ ನೆರವಿನಿಂದ ಕಿರಿಯ ಪ್ರಾಥಮಿಕ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಧಾಕರ ಹೆಗ್ಡೆ ಹೇಳಿದರು.

ಹೆಬ್ರಿಯ ಇಂದಿರಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧನವಾರ ಪುಸ್ತಕ, ಕಲಿಕೋಪಕರಣ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲೆ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮುಖ್ಯಶಿಕ್ಷಕ ರಾಮಾಂಜನೇಯ ಕಮ್ಮಾರ ಅವರನ್ನು ಶ್ಲಾಘಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಕೊಡೆ ಬ್ಯಾಗ್ ಮತ್ತು ಕಲಿಕೋಪಕರಣ ವಿತರಿಸಲಾಯಿತು. ಶಾಲೆ ಅಭಿವೃದ್ಧಿಗೆ ಕೈಜೋಡಿಸಿದ ದಾನಿಗಳನ್ನು ಅಭಿನಂದಿಸಲಾಯಿತು.

ಹೆಬ್ರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಾಲತಿ, ದಾನಿಗಳಾದ ಇಂದಿರಾನಗರ ಕೊರಗಜ್ಜ ಸನ್ನಿಧಿಯ ಮುಖ್ಯಸ್ಥ ಸಂತೋಷ್, ಇ - ಬಯೋಟೋರಿಯಂ ಕಂಪನಿಯ ಎಕ್ಸಿಕ್ಯೂಟಿವ್ ಪ್ರವೀಣ್ ಪೂಜಾರಿ ಪೆರ್ಡೂರು, ಪತ್ರಕರ್ತ ಸುಕುಮಾರ್ ಮುನಿಯಾಲ್, ಶಿಕ್ಷಕ ಸುಧಾಕರ ಶೆಟ್ಟಿ, ಗೌರವ ಶಿಕ್ಷಕಿ ಅನಿತಾ ಹೆಗ್ಡೆ, ಶಿಕ್ಷಕಿ ಸುನೀತಾ ಉಪಸ್ಥಿತರಿದ್ದರು. ಅನಿತಾ ಹೆಗ್ಡೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net