

*ಕಡಿಮೆ ದರದಲ್ಲಿ ರೈತರ ಕೈ ಸೇರಲಿರುವ ಸಸಿಗಳು
*ಆರ್‌ಎಸ್‌ಪಿಡಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಗಿಡಗಳ ಬೇಳವಣಿಗೆ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಮುಂಗಾರು ಆರಂ‘ವಾಗಿರುವ ಬೆನ್ನಲ್ಲೇ ರಾಮನಗರ ತಾಲೂಕು ಸಾಮಾಜಿಕ ವಲಯ ಅರಣ್ಯ ಇಲಾಖೆ ಅರಣ್ಯ ಕೃಷಿ ಪ್ರೋತ್ಸಾಹಿಸುವ ಸಲುವಾಗಿ ರೈತರಿಗೆ ಆರ್‌ಎಸ್‌ಪಿಡಿ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಗಿಡ ಬೆಳೆಸಿ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಮುಂದಾಗಿದೆ.
ಸರ್ಕಾರ ಅರಣ್ಯ ಪ್ರದೇಶ ವಿಸ್ತರಿಸಲು, ಪ್ರಕೃತಿ ಸಮತೋಲನ ಕಾಯ್ದುಕೊಳ್ಳಲು ಪೂರಕವಾಗುವಂತೆ ಪ್ರತಿ ವರ್ಷ ಗಿಡ ಬೆಳೆಸಲು ಹಲವು ಯೋಜನೆಯೊಂದಿಗೆ ಕೆಲಸ ನಿರ್ವಹಿಸುತ್ತಿದೆ. ಆರ್‌ಎಸ್‌ಪಿಡಿ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಿಯಾಯಿತಿ ದರದಲ್ಲಿ ಗಿಡ ವಿತರಣೆ ಮಾಡಲು ಮುಂದಡಿ ಇಟ್ಟಿದೆ.
ಜೂನ್ ಮೊದಲವಾರದಿಂದ ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಅರಣ್ಯ ಇಲಾಖೆ ಕೃಷಿ ಉತ್ಸುಕತೆ ಹೊಂದಿರುವ ರೈತರಿಗೆ ರಾಮನಗರದ ಹುಲಿ ಮುತ್ತಿಗೆ ನರ್ಸರಿಯಲ್ಲಿ ಅಗತ್ಯ ಗಿಡಗಳನ್ನು ದೊರಕಿಸಿಕೊಡುತ್ತಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆ) ಮತ್ತು ಆರ್‌ಎಸ್‌ಪಿಡಿ ಯೋಜನೆಯಲ್ಲಿ 8*12 ಅಳತೆ ಚೀಲಗಳಲ್ಲಿ ಶ್ರೀಗಂಧ, ಬೀಟೆ, ಬಿದಿರು, ಹೊನ್ನೆ, ಹುಣಸೆ, ಮಹಾಗನಿ ಸೇರಿ ಚಿಲದಲ್ಲಿ 10,500 ಗಿಡಗಳಿದ್ದು, 6 ರೂ. ಗೆ ದೊರೆಯಲಿವೆ. 6*9 ಅಳತೆ ಚೀಲದಲ್ಲಿ 6000 ಗಿಡಗಳನ್ನು ಬೆಳೆಸಲಾಗಿದ್ದು 3 ರೂ. ರಿಯಾಯಿತಿ ದರದಲ್ಲಿ ದೊರೆಯಲಿದೆ.
ರಸ್ತೆ ಬದಿ ನೆಡುತೋಪಿಗಾಗಿ 14*20 ಮತ್ತು 10*16 ಅಳತೆ ಚೀಲದಲ್ಲಿ ಕದಂಬ, ಆಕಾಶಮಲ್ಲಿಗೆ, ಗೋಣಿ, ಆಲ, ಬಸುರಿ, ಹೊಂಗೆ, ಮಹಾಗನಿ, ಹಲಸು, ಹೂ ಅರಸಿ, ಬೀಟೆ, ಹೊನ್ನೆ, ಸಿವನಿ, ಜಮ್ಮುನೇರಳೆ, ಬೇವು, ಆಲೆ, ಹುಣಸೆ, ಸೇರಿ 3100 ಗಿಡ ಬೆಳೆಸಲಾಗಿದೆ. ಜತೆಗೆ ನರೇಗಾ ಯೋಜನೆಯಲ್ಲಿ ರಸ್ತೆ ಬದಿ ನೆಡಲು 1600 ಗಿಡ ಬೆಳೆಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಈ ಬಾರಿ ಹೆಚ್ಚಿನ ಪ್ರಮಣದಲ್ಲಿ ನರೇಗಾ ಯೋಜನೆಯಡಿ ಗಿಡಗಳನ್ನು ಬೆಳಸಿಲ್ಲ. ಇದರಿಂದ ಅರಣ್ಯ ಕೃಷಿಯಲ್ಲಿ ಕುಂಠಿತವಾಗುವ ಸಂ‘ವವಿದ್ದು, ಕೂಡಲೇ ಸರ್ಕಾರ ಎಚ್ಚೆತ್ತು ಮುಂಬರುವ ದಿನಗಳಲ್ಲಿ ಗಿಡ ಬೆಳೆಸಿ ಗ್ರಾಪಂ ಮೂಲಕ ರೈತರಿಗೆ ವಿತರಿಸಬೇಕಿದೆ. ಸುನೀತಾ ನಾಗರಾಜ್‌ಸಿಂಗ್‌ಬಾಬು, ವಿಭೂತಿಕೆರೆ ಗ್ರಾಪಂ ಅಧ್ಯಕ್ಷೆಸಾಮಾಜಿಕ ವಲಯ ಅರಣ್ಯ ಇಲಾಖೆ ಕೃಷಿ ಅರಣ್ಯವನ್ನು ಪ್ರೋತ್ಸಾಹಿಸಲು ರೈತರಿಗೆ ಆರ್‌ಎಸ್‌ಪಿಡಿ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಗಿಡಗಳನ್ನು ಬೆಳೆಸಲಾಗಿದೆ. ರೈತರಿಗೆ ಹಾಗೂ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಗೀದಗಳು ಗೊರೆಯಲಿವೆ. ರಸ್ತೆ ಬದಿ ಗಿಡ ನೆಡಲು, ಶಾಲೆ, ದೇವಸ್ಥಾನ ಆವರಣ ಸರ್ಕಾರಿ ಖಾಲಿ ಜಾಗಗಳಲ್ಲಿ ನೆಡಲು ಪ್ರತ್ಯೇಕವಾಗಿ ಗಿಡಗಳನ್ನು ಬೆಳೆಸಲಾಗಿದೆ. ಮಳೆಗಾಲ ಪ್ರಾರಂ‘ವಾಗಿದ್ದು ನಾಟಿಗೆ ಕ್ರಮ ಕೈಗೊಳ್ಳಲಾಗಿದೆ. ಕಿರಣ್‌ಕುಮಾರ್, ಸಾಮಾಜಿಕ ವಲಯ ಅರಣ್ಯಾಧಿಕಾರಿ, ರಾಮನಗರ