ಶಿಕ್ಷಣ ವ್ಯಾಪಾರೀಕರಣ ದುರಂತ : ಶೈಕ್ಷಣಿಕ ಪರಿಕರ ವಿತರಿಸಿ ರವಿಚಂದ್ರ ವಿ.ಕೆ. ಅನಿಸಿಕೆ

BAG DISTRIBUTION
ಉಪ್ಪುಂದ ಕಾವೇರಿ ದುರ್ಗಿ ಮತ್ತು ವಿ.ಕೆ.ಬಾಬುರಾಜ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಟ್ರಸ್ಟ್ ಪ್ರವರ್ತಕ ರವಿಚಂದ್ರ ವಿ.ಕೆ. ಅವರು ಬೇಟೆಯಾಣಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಿಸಿದರು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸರ್ಕಾರ ಜನ ಬಯಸುವ ಶಿಕ್ಷಣ ಕೊಡಬೇಕಾಗುತ್ತದೆ. ಸರ್ಕಾರಿ ಶಾಲೆಗಳು ಮುಚ್ಚುತ್ತಾ ಹೋದರೆ ಮುಂದಿನ ದುರಂತದ ದಿನಗಳನ್ನು ಕಲ್ಪಿಸಲೂ ಸಾಧ್ಯವಿಲ್ಲ ಎಂದು ಉಪ್ಪುಂದ ಕಾವೇರಿ ದುರ್ಗಿ ಮತ್ತು ವಿ.ಕೆ.ಬಾಬುರಾಜ್ ಚಾರಿಟೆಬಲ್ ಟ್ರಸ್ಟ್ ಪ್ರವರ್ತಕ ರವಿಚಂದ್ರ ವಿ.ಕೆ. ಹೇಳಿದರು.

ಟ್ರಸ್ಟ್ ವತಿಯಿಂದ ಕಾಲ್ತೋಡು ಗ್ರಾಮದ ಬೇಟೆಯಾಣಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ನೋಟ್‌ಬುಕ್ ಹಾಗೂ ಲೇಖನ ಸಾಮಗ್ರಿ ವಿತರಿಸಿ ಮಾತನಾಡಿದರು. ಸಂಘ-ಸಂಸ್ಥೆಗಳು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಜತೆಗೆ ಉಳಿದ ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ನೀಡಬೇಕು. ಇದರಿಂದ ಸ್ಫೂರ್ತಿಗೊಂಡು ಕಲಿಕೆಯಲ್ಲಿ ಹಿಂದುಳಿದ ಮಕ್ಕಳೂ ಹೆಚ್ಚಿನ ಶ್ರಮವಹಿಸಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಕನ್ನಡ ಶಾಲೆಗಳು ಸರ್ಕಾರಗಳ ಅಧೀನವಾದರೂ ಅದನ್ನು ಉಳಿಸಿ ಬೆಳೆಸುವಲ್ಲಿ ಊರಿನವರ ಸ್ಪಂದನೆ ಮಹತ್ವದ್ದಾಗಿರುತ್ತದೆ. ಸರ್ಕಾರದ ಅನುದಾನ ಸಮರ್ಪಕವಾಗಿ ಬಾರದೇ ಇರುವ ಕಾರಣ ಸ್ಥಳೀಯ ದಾನಿಗಳು, ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಸಂಸ್ಥೆಗಳು ಒಟ್ಟಾಗಿ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕಾಗುತ್ತದೆ ಎಂದರು. ಮುಖ್ಯಶಿಕ್ಷಕ ಶಶಿಧರ ಗಾಂವ್ಕರ್ ಪ್ರಾಸ್ತಾವಿಸಿದರು. ಸಹಶಿಕ್ಷಕ ರಾಮ ಕಾರ್ಯಕ್ರಮ ನಿರ್ವಹಿಸಿದರು. ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net