ಸೋಂಕಿತರ ಮನೆಗೆ ಆಹಾರದ ಕಿಟ್ ವಿತರಿಸಿ

Basavraj Bommai 55
Published on

ಶಿಗ್ಗಾಂವಿ: ಕೋವಿಡ್ ಸ್ಥಿತಿಗತಿ ಕುರಿತು ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ 12 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರೊಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸೋಮವಾರ ವಿಡಿಯೋ ಸಂವಾದ ನಡೆಸಿದರು.

ತಾಲೂಕಿನ ತಡಸ, ಕುನ್ನೂರು, ದುಂಡಸಿ, ಹೊಸೂರು, ಚಂದಾಪುರ, ಅಂದಲಗಿ, ಹಿರೇಬೆಂಡಿಗೇರಿ, ಬನ್ನೂರು, ಕಬನೂರು, ಬಸವನಾಳ, ಕ್ಯಾಲಕೊಂಡ, ಅತ್ತಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಭಾಗವಹಿಸಿ ಹಲವಾರು ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆದರು. ಅಲ್ಲದೆ, ಕೆಲ ಪಿಡಿಒಗಳ ಅಸಹಕಾರದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿದ ಸಚಿವರು, ‘ತಾಲೂಕಿನಲ್ಲಿರುವ ಕೋವಿಡ್ ಸೋಂಕಿತರ ಮನೆಗೆ ತೆರಳಿ ಆಹಾರದ ಕಿಟ್ ವಿತರಿಸಿ ಕರೊನಾ ಸೋಂಕಿತ ಮಹಿಳೆಯರಿಗೆ ಮಹಿಳಾ ವೈದ್ಯರಿಂದಲೇ ತಪಾಸಣೆಗೆ ವ್ಯವಸ್ಥೆ ಮಾಡಿ. ಆಶಾ ಕಾರ್ಯಕರ್ತೆಯರಿಗೆ ಪಿಪಿಇ ಕಿಟ್, ಮಾಸ್ಕ್, ಹ್ಯಾಂಡ್​ಗ್ಲೌಸ್, ಸ್ಯಾನಿಟೈಸರ್ ಒದಗಿಸಿ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳನ್ನು ಕಾರ್ಯಪಡೆಗೆ ಜೋಡಣೆ ಮಾಡಿ’ ಎಂದು ತಾಲೂಕು ಆಡಳಿತಕ್ಕೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net