ಸೇನಾನಿಗಳ ಬಗ್ಗೆ ಅವಹೇಳನ ಖಂಡನೀಯ

ಸೇನಾನಿಗಳ ಬಗ್ಗೆ ಅವಹೇಳನ ಖಂಡನೀಯ
Published on

ನಾಪೋಕ್ಲು: ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ವಿದ್ಯಾಧರ್ ಎಂಬ ವಕೀಲ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುರುವುದು ಖಂಡನೀಯ ಎಂದು ನಾಪೋಕ್ಲು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಂಡೀರ ನಾಣಯ್ಯ ಹೇಳಿದರು.

ನಾಗರಿಕ ಸಮಾಜದಲ್ಲಿ ಈ ರೀತಿಯ ಬೆಳವಣಿಗೆ ಒಳ್ಳೆಯದಲ್ಲ. ದೇಶದ್ರೋಹಿಗಳನ್ನು ಪ್ರಚೋದಿಸುವ ಹೇಳಿಕೆ ನೀಡಿರುವುದನ್ನು ಮಾಜಿ ಸೈನಿಕರ ಸಂಘ ತೀವ್ರವಾಗಿ ಖಂಡಿಸುತ್ತದೆ. ಇವರನ್ನು ಸರ್ಕಾರ ಗಡಿಪಾರು ಮಾಡಿ, ವಕೀಲ ವೃತ್ತಿಯಲ್ಲಿ ಮುಂದುವರಿಯದಂತೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಇಲ್ಲಿನ ಮಹಿಳಾ ಸಮಾಜದಲ್ಲಿ ಮಾಜಿ ಸೈನಿಕರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಅಪ್ಪುಮಣಿಯಂಡ ನಾಣಯ್ಯ, ಕಾರ್ಯದರ್ಶಿ ಕೇಟೋಳಿರ ಅಚ್ಚಪ್ಪ, ಖಜಾಂಚಿ ಕರೀಂ, ನಿರ್ದೇಶಕ ಪುಲ್ಲೇರ ಪಳಂಗಪ್ಪ, ಪಾಡಿಯಮ್ಮಂಡ ಅಪ್ಪಣ್ಣಮಯ್ಯ, ಅಮ್ಮಂಡ ಅಶೋಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net