ಯಳಂದೂರಿನಲ್ಲಿ ನೀರಸ ಪ್ರತಿಕ್ರಿಯೆ

ಯಳಂದೂರಿನಲ್ಲಿ ನೀರಸ ಪ್ರತಿಕ್ರಿಯೆ
Published on

ಯಳಂದೂರು: ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ರಾಜ್ಯ ಬಂದ್‌ಗೆ ಯಳಂದೂರು ಪಟ್ಟಣ ಹಾಗೂ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಶನಿವಾರ ಬೆಳಗ್ಗೆಯಿಂದಲೇ ಪಟ್ಟಣ ಹಾಗೂ ತಾಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಇತರೆ ವಾಹನಗಳ ಸಂಚಾರ ಮಾಮೂಲಾಗಿತ್ತು. ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ತೆರೆದಿದ್ದವು. ತಾಲೂಕಿನ ಯಾವುದೇ ಕನ್ನಡ ಪರ ಸಂಘಟನೆಗಳು ಸಾಂಕೇತಿಕವಾಗಿಯೂ ಪ್ರತಿಭಟನೆಯನ್ನು ಮಾಡಲಿಲ್ಲ. ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟಕ್ಕೂ ಶನಿವಾರ ವಾರಾಂತ್ಯ ಹಾಗೂ ದೇವರ ವಾರದ ದಿನವಾಗಿದ್ದರಿಂದ ಎಂದಿನಂತೆ ಜನರು ಬಸ್‌ಗಳಲ್ಲಿ, ಖಾಸಗಿ ವಾಹನಗಳಲ್ಲಿ ಸಂಚರಿಸಿ ದೇವರ ದರ್ಶನ ಪಡೆದರು. ಆಟೋ, ಕಾರು ಚಾಲಕರು, ಮಾಲೀಕರೂ ಸಹ ಬಂದ್ ಮಾಡಿರಲಿಲ್ಲ. ಸಮೀಪದ ಸಂತೆಮರಹಳ್ಳಿ ಹೋಬಳಿ, ತಾಲೂಕಿನ ರಾಷ್ಟ್ರೀಯ ಹೆದ್ದಾರಿ 948 ಹಾದು ಹೋಗಿರುವ ಗ್ರಾಮಗಳಲ್ಲೂ ಎಂದಿನಂತೆ ವಾಹನ ಸಂಚಾರ ಹಾಗೂ ವಹಿವಾಟು ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net