

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರ ಪಾಲಿಕೆಗಳು ಸೇರಿ "ಬೆಂಗಳೂರು ಸಿಟಿ ದಿಶಾಂಕ್' ಮೊಬೈಲ್ ತಂತ್ರಾಂಶವನ್ನು ಬಿಡುಗಡೆ ಮಾಡಲಾಗಿದೆ. ಇದು ಜಿ.ಐ.ಎಸ್ ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಜಿಬಿಎ, 5 ನಗರ ಪಾಲಿಕೆಗಳು, ವಲಯ, ವಿಧಾನಸಭಾ ಕ್ಷೇತ್ರ ಹಾಗೂ ವಾರ್ಡ್ (ಹಳೆಯ 198 ವಾರ್ಡ್ಗಳು)ಗಳ ಅಧಿಕೃತ ಗಡಿಗಳನ್ನು ವೀಕ್ಷಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿವರಗಳುಳ್ಳ ಜಿ.ಐ.ಎಸ್ ಮಾಹಿತಿಯನ್ನು ಸೇರಿಸಲಾಗುವುದು.