ರಾಷ್ಟ್ರ ಮಟ್ಟದ ಹಾಕಿ ಟೂರ್ನಿಗೆ ದಿಶಾ ಆಯ್ಕೆ

24mdk09 Disha
Published on

ಕುಶಾಲನಗರ: ಜಾರ್ಖಂಡ್‌ನ ರಾಂಚಿಯಲ್ಲಿ ಜ.28ರಂದು ನಡೆಯುವ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾಟದಲ್ಲಿ ಕರ್ನಾಟಕ ತಂಡದಿಂದ ದಿಶಾ ನಿಡ್ಯಮಲೆ ಆಯ್ಕೆಯಾಗಿದ್ದಾಳೆ. ಕೂಡಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿ 11ನೇ ತರಗತಿಗೆ ಮೈಸೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಆಯ್ಕೆಯಾಗಿದ್ದು, ಟೆರೇಷಿಯನ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈಕೆ ಮೂಲತಃ ಭಾಗಮಂಡಲದ ಪ್ರಸ್ತುತ ಕುಶಾಲನಗರ ಸಮೀಪದ ಮರಡಿಯೂರು ಗ್ರಾಮದ ನಿವಾಸಿ ದಿನೇಶ್ ನಿಡ್ಯಮಲೆ ಮತ್ತು ಸುಲೋಚನಾ ದಂಪತಿ ಪುತ್ರಿ. ಸುಂದರೇಶ್ ಮತ್ತು ಅಶ್ವಿನಿ ಈಕೆಗೆ ತರಬೇತುದಾರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net