ರೋಗ ನಿರೋಧಕ ಶಕ್ತಿ ಹೆಚ್ಚಳ

9-SanduruP2
ತೋರಣಗಲ್‌ನಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನದ ಮೂರನೇ ಸುತ್ತಿನ ಕಾರ್ಯಕ್ರಮ ನಡೆಯಿತು. ಪುರಸಭೆ ಸದಸ್ಯ ಎರ‌್ರಿಸ್ವಾಮಿ, ಬಿಎಚ್‌ಇಒ ಶಿವಪ್ಪ, ಆರೋಗ್ಯ ಸುರಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಇತರರಿದ್ದರು.
Published on

ಸಂಡೂರು: ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸಬೇಕೆಂದು ಕುರೇಕುಪ್ಪ ಪುರಸಭೆ ಸದಸ್ಯ ಎರ‌್ರಿಸ್ವಾಮಿ ಹೇಳಿದರು.

ತೋರಣಗಲ್ಲು ರೈಲ್ವೆ ನಿಲ್ದಾಣದ 21ನೇ ವಾರ್ಡ್‌ನಲ್ಲಿ ಇಂದ್ರಧನುಷ್ 5.0 ಲಸಿಕಾ ಅಭಿಯಾನದ ಮೂರನೇ ಸುತ್ತಿನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಲಸಿಕೆ ಪಡೆಯದೆ ವಂಚಿತರಾದ ಮಕ್ಕಳಿಗೆ ಮೂರನೇ ಸುತ್ತಿನಲ್ಲಿ ಲಸಿಕೆ ನೀಡಲಾಗುತ್ತಿದೆ.

ಕಡ್ಡಾಯವಾಗಿ ಮಕ್ಕಳಿಗೆ ವ್ಯಾಕ್ಸಿನ್ ಕೊಡಿಸಬೇಕು ಎಂದರು. ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮಕ್ಕಳಿಗೆ ಲಸಿಕೆ ಕೊಡಿಸಬೇಕು.

ಶಿಶುಗಳಿಗೆ ಹನ್ನೆರಡು ಮಾರಕ ರೋಗಗಳ ವಿರುದ್ಧ ಹೋರಾಡಲು ಹುಟ್ಟಿನಿಂದ ಐದು ವರ್ಷದೊಳಗೆ ಇಂದ್ರಧನುಷ್‌ನ ಏಳು ಬಾರಿ ಲಸಿಕೆ ಹಾಕಿಸಬೇಕು ಎಂದರು. ಆರೋಗ್ಯ ಸುರಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್,

ಆಶಾ ಕಾರ್ಯಕರ್ತೆ ಶ್ರೀದೇವಿ, ಆಶಾ, ರಾಜೇಶ್ವರಿ, ಕಾವೇರಿ, ರೇಖಾ, ಹುಲಿಗೆಮ್ಮ, ತಾಯಂದಿರಾದ ಕಲಾವತಿ, ಸುಬ್ಬಲಕ್ಷ್ಮೀ, ದೇವಿ, ಮಬೀನಾ, ಲಿಂಗಮಣಿ, ಪರಿವಿಂದರ್, ಕೃಷ್ಣವೇಣಿ, ಸುನೀತಾ ಹಾಗೂ ಶಿವಲಿಂಗಪ್ಪ, ರಾಮಾಂಜನಪ್ಪ, ಸುನೀಲ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net