More

    ಈ ಚಹಾವು ಆರೋಗ್ಯವನ್ನು ಕಾಪಾಡುವುದರ ಜತೆಗೆ ರೋಗನಿರೋಧಕತೆನ್ನು ಹೆಚ್ಚಿಸುತ್ತದೆ..

    ಬೆಂಗಳೂರು: ಅನೇಕರು ಸಕ್ಕರೆ ಚಹಾದ ಬದಲಿಗೆ ಬೆಲ್ಲದ ಚಹಾ ಸೇವನೆ ಅಥವಾ ಕಷಾಯವನ್ನು ಕುಡಿಯಲು ಇಷ್ಟಪಡುತ್ತಾರೆ. ಒಂದು ಪಾತ್ರೆಯಲ್ಲಿ ನೀರು ಹಾಕಿ ಶುಂಠಿ, ಏಲಕ್ಕಿ, ತುಳಸಿ ಎಲೆಗಳು, ಶುಂಠಿ ಮತ್ತು ದಾಲ್ಟಿ ಹಾಕಿ ಕುದಿಸಿ. ಅದರ ನಂತರ, ಚಹಾ ಪುಡಿ ಮತ್ತು ಬೆಲ್ಲವನ್ನು ಬೆರೆಸಿ ಕುದಿಸಿ. ಈ ಚಹಾವನ್ನು ಸೋಸಿಕೊಂಡು ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.

    ಇದನ್ನೂ ಓದಿ: ಪ್ರತಿದಿನ ಈ ಹಾಲನ್ನು ಕುಡಿದರೆ ತೂಕ ಕಡಿಮೆಯಾಗುವುದರ ಜತೆಗೆ ನಿಮ್ಮ ಮೂಳೆಗಳು ಗಟ್ಟಿಯಾಗುತ್ತವೆ..!

    ಆದರೆ ಬೆಲ್ಲದ ಚಹಾದಲ್ಲಿ ಹಾಲನ್ನು ಬಳಸದಿರುವುದೇ ಉತ್ತಮ. ಇದು ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದಾಗಿದ್ದು, ಆದ್ದರಿಂದ ಹಾಲಿನ ಚಹಾದಲ್ಲಿ ಬೆಲ್ಲವನ್ನು ಬಳಸಬಾರದು ಎಂದು ತಜ್ಞರು ಹೇಳುತ್ತಾರೆ. ಬೆಲ್ಲದ ಶುಂಠಿ ಟೀ ಕುಡಿಯಲು ತುಂಬಾ ರುಚಿಯಾಗಿದ್ದು, ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಲ್ಲವು ನೈಸರ್ಗಿಕ ಸಿಹಿಕಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಯಾವುದೇ ಸಮಸ್ಯೆಗಳಿಗೆ ಕಾರಣವಾಗುವುದಿಲ್ಲ.

    ಬೆಲ್ಲವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದರಲ್ಲಿ ಕ್ಯಾಲ್ಸಿಯಂ, ಮೆಗ್ನಿಸಿಯಮ್, ಪೊಟ್ಯಾಸಿಯಮ್, ಬಿ, ಕಾಂಪ್ಲೆಕ್ಸ್, ವಿಟಮಿನ್ ಸಿ, ಬಿ2, ಎಲು ಇದೆ. ಶುಂಠಿ ಟೀ ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದೆ. ಈ ಚಹಾವನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಶುಂಠಿ ಚಹಾವನ್ನು ಕುಡಿಯುವ ಮೂಲಕ ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದಾಗಿದೆ.

    ಇದನ್ನೂ ಓದಿ: ಪತ್ನಿಗೆ ಅಮಾನುಷವಾಗಿ ಥಳಿಸಿ ನಡುರಸ್ತೆಯಲ್ಲೇ ತಲಾಖ್ ನೀಡಿದ ಪತಿ..

    ಕಬ್ಬಿಣದ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ಆದರೆ ಬೆಲ್ಲದ ಚಹಾದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ಇದು ರಕ್ತಹೀನತೆಗೆ ರಾಮಬಾಣವಾಗಿದೆ. ಮಾನ್ಸೂನ್ ಸಮಯದಲ್ಲಿ ಬೆಲ್ಲದ ಚಹಾವನ್ನು ಕುಡಿಯುವುದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದರ ಜತೆಗೆ ಇದು ದೇಹವನ್ನು ಸಹ ಬೆಚ್ಚಗಿಡುತ್ತದೆ.

    ಬೆಲ್ಲದ ಟೀ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೇ ಮಳೆಗಾಲದಲ್ಲಿ ಉಂಟಾಗುವ ಸಣ್ಣಪುಟ್ಟ ಸೋಂಕುಗಳಿಂದ ಮುಕ್ತಿ ಪಡೆಯಲು ನಿತ್ಯವೂ ಈ ಚಹಾ ಕುಡಿಯುವುದು ಉತ್ತಮ. ಪ್ರಸ್ತುತ ಲೇಖನವು ಸಾಮಾನ್ಯ ಮಾಹಿತಿ ಮತ್ತು ಸಲಹೆಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ಸ್ವಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts