ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಚರ್ಚೆ

17 HKR 2
Published on

ಹಿರೇಕೆರೂರ: ತಾಲೂಕು ಬಿಜೆಪಿ ಮಂಡಲದ ವತಿಯಿಂದ ಭಾನುವಾರ ವಿಧಾನಸಭಾ ಕ್ಷೇತ್ರದ ಪ್ರಮುಖ ಸಂಘ ಸಂಸ್ಥೆಗಳ ಮುಖ್ಯಸ್ಥರು, ಸ್ವಾಮೀಜಿಗಳನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಸಾಧನೆಗಳ ಪುಸ್ತಕ, ಕರಪತ್ರ ನೀಡಿ ಅವರೊಂದಿಗೆ ರ್ಚಚಿಸಲಾಯಿತು.


ಪಟ್ಟಣದ ಗಣ್ಯ ಉದ್ಯಮಿ, ಸಿದ್ದಲಿಂಗೇಶ ಶೆಟ್ಟರ, ಆರ್ಯ ವೈಶ್ಯ ಸಮಾಜದ ಪ್ರಮುಖ ಪ್ರಕಾಶ ಶಿರಗಂಬಿ, ರಟ್ಟಿಹಳ್ಳಿಯ ಪ್ರಿಯದರ್ಶಿನಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಘವೇಂದ್ರ ಅಗಸಿಬಾಗಿಲ, ಬ್ರಾಹ್ಮಣ ಸಮಾಜದ ಪ್ರಮುಖ ಸತೀಶ್ ನಾಡಿಗೇರ, ತಿಪ್ಪಾಯಿಕೊಪ್ಪದ ಮೂಕಪ್ಪ ಶಿವಯೋಗಿಗಳ ಮಠದ ವೀರೂಪಾಕ್ಷ ಸ್ವಾಮೀಜಿ, ಮಹಾಂತ ಸ್ವಾಮೀಜಿ, ರಟ್ಟಿಹಳ್ಳಿಯ ಕಬ್ಬಿಣ ಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತು.


ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿದ್ದರಾಜು ಕಲಕೋಟಿ, ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ್ ತಿಪ್ಪಶೆಟ್ಟಿ, ಪಪಂ ಸದಸ್ಯ ಗುರುಶಾಂತ ಎತ್ತಿನಹಳ್ಳಿ, ಮುಖಂಡರಾದ ಗಂಗಾಧರ ಮಾಗನೂರ, ಎನ್.ಎಸ್. ಚಿಕ್ಕನರಗುಂದಮಠ, ಹುಚ್ಚಣ್ಣ ಚೌಟಗಿ, ಗೋಪಾಲ್ ಬಾದಾಮಿ, ಬಸವರಾಜ ಚಿಂದಿ, ರುದ್ರೇಶ ನೀಲನಗೌಡ್ರ, ನಾಗರಾಜ ಹಿರೇಮಠ, ಗಿರೀಶ ಪಾಟೀಲ, ಸಂತೋಷ ಹಳ್ಳಪ್ಪಗೌಡ್ರ, ಶಂಕರಗೌಡ ಚನ್ನಗೌಡ್ರ, ವೀರಣ್ಣ ಚಿಟ್ಟೂರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net