

ಚನ್ನಪಟ್ಟಣ: ಈ ಹಿಂದಿನ ಒಪ್ಪಂದದಂತೆ ಪಿಎಲ್ಡಿ ಬ್ಯಾಂಕ್ ಅಧ್ಯ ಸ್ಥಾನಕ್ಕೆ ಗೋವಿಂದನಹಳ್ಳಿ ನಾಗರಾಜು ರಾಜೀನಾಮೆ ನೀಡಬೇಕು. ಇಲ್ಲವಾದರೆ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಾಡಲಾಗುವುದು ಎಂದು ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಡಿ.ಎಂ.ಕೆ.ಕುಮಾರ್ ಎಚ್ಚರಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡು ವರ್ಷದಿಂದ ಬ್ಯಾಂಕ್ನಲ್ಲಿ ಸಾಕಷ್ಟು ಗೊಂದಲ ಮುಂದುವರಿದಿದೆ. ಹಾಲಿ ಅಧ್ಯರು ಈಗಾಗಲೇ ಒಪ್ಪಂದದಂತೆ ರಾಜೀನಾಮೆ ನೀಡಬೇಕಿತ್ತು. ಆದರೆ, ಮಾತಿಗೆ ತಪ್ಪಿದ್ದಾರೆ. ಏಳು ಜೆಡಿಎಸ್ ಬೆಂಬಲಿತ ನಿರ್ದೇಶಕರು ಒಟ್ಟಾಗಿದ್ದೇವೆ. ಅನ್ಯಾಯವಾಗಿದ್ದರೂ, ಬೇರೆಯವರ ಜತೆ ಕೈ ಜೋಡಿಸದೆ ಪ ನಿಷ್ಠರಾಗಿದ್ದೇವೆ. ಚುನಾವಣೆ ನಂತರ ಐದು ಮಂದಿಗೆ ಅಧ್ಯ ಸ್ಥಾನ ಹಾಗೂ ಐದು ಮಂದಿ ಉಪಾಧ್ಯರಂತೆ ಅಧಿಕಾರ ಹಂಚಿಕೆಯಾಗಿತ್ತು. ಆದರೆ, ಈ ಒಪ್ಪಂದದಂತೆ ಯಾವುದೂ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವರಿಷ್ಠರ ಸೂಚನೆ ಮೇರೆಗೆ ಮೊದಲ ಅವಧಿಗೆ ನಾಗರಾಜು ಅವರಿಗೆ ಒಂದು ವರ್ಷದ ಮಟ್ಟಿಗೆ ಅಧಿಕಾರ ನೀಡಲಾಗಿತ್ತು. ಹಿಂದೆ ಅವರು ನಾಲ್ಕು ವರ್ಷ ಅಧಿಕಾರ ಅನುಭವಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ರಾಜೀನಾಮೆ ನೀಡುವಂತೆ ಸೂಚಿಸಿದ್ದರೂ ನೀಡಿಲ್ಲ ಎಂದು ಆರೋಪಿಸಿದರು.
ಈ ವಿಚಾರದಲ್ಲಿ ಪಕ್ಷದ ನಾಯಕರು ಶ್ರೀವಾಗಿ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಸಹಕಾರ ಇರುವುದಿಲ್ಲ. ನಾವು ಅವಿಶ್ವಾಸ ತರುವ ಮುನ್ನ ನಾಗರಾಜು ಅವರೇ ರಾಜೀನಾಮೆ ನೀಡಬೇಕು ಎಂದರು.
ಬ್ಯಾಂಕ್ ನಿರ್ದೇಶಕ ಮಾಗನೂರು ಗಂಗರಾಜು ಮಾತನಾಡಿ, ಅಧಿಕಾರ ಹಂಚಿಕೆ ವಿಚಾರದಲ್ಲಿ ತಾರತಮ್ಯ ನಡೆಯುತ್ತಿದೆ. ತಾಲೂಕಿನಲ್ಲಿ ಜೆಡಿಎಸ್ ಅಧೋಗತಿಗೆ ಇಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡರಾದ ಇ.ತಿ.ಶ್ರೀನಿವಾಸ್, ಎವಿ ಹಳ್ಳಿ ವೆಂಕಟೇಶ್, ಎಪಿಎಂಸಿ ಸಿದ್ದಪ್ಪ, ಎಲೆಕೇರಿ ನಂದೀಶ್, ಇಗ್ಗಲೂರು ಸೋಮಶೇಖರ್, ಅಕ್ಕೂರು ಚಿನ್ನಗಿರಿ, ಎಸ್.ವಿ.ಟಿ. ವೆಂಕಟೇಶ್, ರೇಖಾ ಉಮಾಶಂಕರ್ ಇದ್ದರು.
ಜೆಡಿಎಸ್ನಲ್ಲಿ ಮತ್ತೊಮ್ಮೆ ಭಿನ್ನಮತ ಸ್ಫೋಟ!!!
ಚನ್ನಪಟ್ಟಣದ ಜೆಡಿಎಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಅದು ಸಹಕಾರಿ ೇತ್ರದಲ್ಲಿ ಎಂಬುದು ವಿಶೇಷ.
ಚನ್ನಪಟ್ಟಣ ೇತ್ರದ ಜೆಡಿಎಸ್ ಹಾಗೂ ಭಿನ್ನಮತೀಯ ಚಟುವಟಿಕೆಗೂ ಬಿಡಲಾರದ ನಂಟಿದೆ ಎಂದರೆ ತಪ್ಪಾಗಲಾರದು. ಮಾಜಿ ಸಚಿವ ದಿ. ಎಂ.ವರದೇಗೌಡರ ಕಾಲದಿಂದಲೂ ಇದು ನಡೆದುಕೊಂಡೇ ಬಂದಿರುವ ಇತಿಹಾಸವಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ೇತ್ರಕ್ಕೆ ಕಾಲಿಟ್ಟ ಬಳಿಕ ತಾಲೂಕಿನಲ್ಲಿ ಬಣ ರಾಜಕೀಯ ಅಲ್ಪಮಟ್ಟಿಗೆ ಣಿಸಿತ್ತು. ಎಚ್.ಡಿ.ಕೆ. ೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೇಂದ್ರದತ್ತ ತೆರಳಿದ ಬಳಿಕ, ಪದಲ್ಲಿ ಬಣರಾಜಕೀಯ ಮತ್ತೆ ಮುನ್ನೆಲೆಗೆ ಬಂದಿದೆ.