

ಬೈಲಹೊಂಗಲ: ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಹಾನಗಲ್ ಕುಮಾರ ಸ್ವಾಮೀಜಿ 158ನೇ ಜಯಂತ್ಯುತ್ಸವ ಹಾಗೂ ನಾಗನೂರ&ಬೆಳಗಾವಿ ರುದ್ರಾಮಠದ ಡಾ.ಶಿವಬಸವ ಸ್ವಾಮೀಜಿ 31ನೇ ಪುಣ್ಯಸ್ಮರಣೆ, ಪ್ರವಚನ ಸಮಾರಂಭ ಸೆ.2ರಿಂದ 4ರ ವರೆಗೆ ಜರುಗಲಿದೆ.
ಪ್ರತಿದಿನ ಸಂಜೆ 6ರಿಂದ 9ರವರೆಗೆ ಪ್ರವಚನ ನಡೆಯಲಿದೆ. 2ರಂದು ಸಂಜೆ 6 ಗಂಟೆಗೆ ಪ್ರವಚನ ಉದ್ಘಾಟನೆ ನಡೆಯಲಿದ್ದು, ಗದಗ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ, ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಅಧ್ಯತೆ ವಹಿಸಲಿದ್ದು, ಬೆಳಗಾವಿ ರುದ್ರಾಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಹುಬ್ಬಳ್ಳಿ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ನೇತತ್ವ ವಹಿಸುವರು. ಶೇಗುಣಸಿ ಡಾ.ಮಹಾಂತಪ್ರಭು ಸ್ವಾಮೀಜಿ ಪ್ರವಚನ ನಡೆಸಿಕೊಡುವರು.
3ರ ಪ್ರವಚನ ಕಾರ್ಯಕ್ರಮಕ್ಕೆ ಮುರಗೋಡ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ, ಅಲ್ಲಮಪ್ರಭು ಸ್ವಾಮೀಜಿ, ಮುನವಳ್ಳಿ ಮುರುಘೇಂದ್ರ ಸ್ವಾಮೀಜಿ ನೇತತ್ವವಹಿಸುವರು. 4ರ ಪ್ರವಚನ ಕಾರ್ಯಕ್ರಮಕ್ಕೆ ಬೆಳಗಾವಿ ಡಾ.ಅಲ್ಲಮಪ್ರಭು ಸ್ವಾಮೀಜಿ, ಹಂದಿಗುಂದದ ಶಿವಾನಂದ ಸ್ವಾಮೀಜಿ, ರುದ್ರಾಮಠದ ಬಸವಲಿಂಗ ಸ್ವಾಮೀಜಿ ನೇತತ್ವ ವಹಿಸುವರು.
ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅಧ್ಯತೆ ವಹಿಸುವರು. ನಿಚ್ಚಣಕಿ ಪಂಚಾರಿ ಸ್ವಾಮೀಜಿ, ದೊಡವಾಡದ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು ಎಂದು ಮಾಜಿ ಸಚಿವ ಶಿವಾನಂದ ಕೌಜಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.