

ರಾಮನಗರ: ಸಮಾಜದಲ್ಲಿ ಬದಲಾವಣೆ ಆಗಬೇಕಾದರೆ ಎಲ್ಲರಲ್ಲೂ ಶಿಸ್ತು ಅಳವಡಿಸಿಕೊಳ್ಳುವ ಜತೆಗೆ ಉನ್ನತ ಶಿಕ್ಷಣ ಪಡೆಯಬೇಕಿದೆ ಎಂದು ಚಿತ್ರದುರ್ಗ ಮಾದರ ಚನ್ನಯ್ಯ ಗುರುಪೀಠದ ಅಧ್ಯಕ್ಷ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.
ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಾತೆ ಸಾವಿತ್ರಿ ಬಾ ಫುಲೆ ಚಾರಿಟಬಲ್ ಟ್ರಸ್ಟ್ನಿಂದ ಭಾನುವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರು, ಜಾನಪದ ಗಾಯಕರಿಗೆ ಸನ್ಮಾನ ಮತ್ತು ಜಾನಪದ ಗಾಯನೋತ್ಸವ, ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಾವಿತ್ರಿ ಬಾಯಿ ಫುಲೆ ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ನೀಡಿದ್ದಾರೆ. ಆದರೆ ಇಂದು ಅರ್ಜಿ ಹಾಕಿದರೆ ಸಾಕು ನಮಗೆ ಶಿಕ್ಷಣ ಸಿಗುತ್ತಿದೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಜತೆಗೆ ಸಮಾಜದ ಸಂಟನೆಗಳು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಕಾರ ನೀಡಿ, ಇಂತಹ ಪ್ರತಿಭಾ ಪುರಸ್ಕಾರಗಳ ಮೂಲಕ ಮತ್ತಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿ ಅಭಿವೃದ್ಧಿಗೆ ಶ್ರಮಿಸಿ ಎಂದರು.
ಮಾತೆ ಸಾವಿತ್ರಿ ಬಾಫುಲೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ. ನಾಗೇಶ್ ಮಾತನಾಡಿ, ಅವಿದ್ಯಾವಂತ ಸಮಾಜಕ್ಕೆ ಶಿಕ್ಷಣ ನೀಡಿ ಸಮಾಜವನ್ನು ಜಾಗೃತಗೊಳಿಸಿದ ಫುಲೆ ದಂಪತಿಗಳ ಹೋರಾಟ ಈಗ ಇತಿಹಾಸ. ಎಲ್ಲರಿಂದಲೂ ಉತ್ತಮ ಸಹಕಾರ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಟ್ರಸ್ಟ್ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲಿದೆ ಎಂದರು. ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಮಾಜಿ ಕೇಂದ್ರ ಸಚಿವ ಆನೇಕಲ್ ನಾರಾಯಣಸ್ವಾಮಿ, ಹಿರಿಯ ಕೆಎಎಸ್ ಅಧಿಕಾರಿ ಎನ್.ವೆಂಕಟರಾಜು, ಆಲ್ಇಂಡಿಯಾ ಬಹುಜನ ಸಮಾಜಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ರಾಜ್ಯ ಪ್ರಧಾನಕಾರ್ಯದರ್ಶಿ ಅಂದಾನಪ್ಪ ಮಾತನಾಡಿದರು.
ಬಸವಮೂರ್ತಿ ಮಾದರ ಚನ್ನಯ್ಯ ಶ್ರೀಗಳಿಗೆ ಗುರುವಂದನೆ ನಡೆಸಲಾಯಿತು. ನಂತರ ಜಿಲ್ಲೆಯ ಎಲ್ಲ ತಾಲೂಕಿನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹಾಗೂ ಸಮಾಜದ ಎಲ್ಲ ರಂಗದಲ್ಲಿ ಗುರುತಿಸಿಕೊಂಡು ಸಾಧನೆ ಮಾಡಿದ ಹಿರಿಯರು, ಪೌರ ಕಾರ್ಮಿಕರು, ಚಪ್ಪಲಿ ತಯಾರಕರು, ಪೊಲೀಸರು, ಜಾನಪದ ಕಲಾವಿದರು, ಗಾಯಕರನ್ನು ಗೌರವಿಸಲಾಯಿತು.
ಮುಖಂಡರಾದ ನರಸಿಂಹಯ್ಯ, ಡಾ.ನಮನ ಚಂದ್ರು, ಬಿ.ಎಂ.ರಮೇಶ್ಕುಮಾರ್, ಶಾಂತರಾಜ್, ವೆಂಕಟಾಚಲ, ಕೃಷ್ಣಮೂರ್ತಿ, ಶಿವರಾಜ್, ಆನಂದ್ಕುಮಾರ್, ಮುರುಗೇಶ್, ಮಮತಾ, ಅವಿನಾಶ್, ಕಿರಣ್, ಸಿ.ಚಂದ್ರರಾಜ್, ವಿಜಯಕುಮಾರ್, ಜೀವ, ಶಿವರಾಜು, ಆನಂದ್, ರಮೇಶ್, ಪ್ರವಿಣ್, ಶ್ರೀಕಂಠು, ಗೋಪಾಲ್ ಇತರರು ಇದ್ದರು.
ಸಂಟನೆಯಿಂದ ಸಮಾಜಕ್ಕೆ ಶಕ್ತಿ
ಸಂಟನೆ ಇದ್ದರೆ ಮಾತ್ರ ಸಮಾಜಕ್ಕೆ ಶಕ್ತಿ ಸಿಗುತ್ತದೆ. ಸರ್ಕಾರ ಸುಭದ್ರವಾಗಿದ್ದು, ಜನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಪಾಲಕರು ಮಕ್ಕಳಿಗೆ ಉನ್ನತ ವಿದ್ಯೆ ಕೊಡಿಸಬೇಕು. ನಮ್ಮ ಸ್ಥಾನಮಾನದ ಕಣ್ಣು ತೆರೆಸುವ ದಾರಿದೀಪ ವಿದ್ಯೆ. ಸರ್ಕಾರ ಅನೇಕ ರೀತಿಯಲ್ಲಿ ಮಕ್ಕಳಿಗೆ ಉಚಿತ ಬಟ್ಟೆ, ಪುಸ್ತಕ, ಬಿಸಿಯೂಟ, ವಸತಿಗೆ ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಹಲವಾರು ಸವಲತ್ತು ನೀಡುತ್ತಿದೆ. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವ ಮಾತೆ ಸಾವಿತ್ರಿ ಬಾಫುಲೆ ಚಾರಿಟಬಲ್ ಟ್ರಸ್ಟ್ನ ಸಮಾಜಮುಖಿ ಕಾರ್ಯ ಮತ್ತಷ್ಟು ಹೋಬಳಿ, ತಾಲೂಕು ಮಟ್ಟದಲ್ಲಿ ನಡೆಯಲಿ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.