ವಿದ್ಯಾರ್ಥಿಗಳ ಉನ್ನತಿಗೆ ಶಿಸ್ತು ಮುಖ್ಯ: ಪಿ.ಜಿ.ಆರ್.ಸಿಂಧ್ಯಾ ಅಭಿಮತ

Sub_Discipline
Published on

ಸುಬ್ರಹ್ಮಣ್ಯ: ಯುವ ವಿದ್ಯಾರ್ಥಿಗಳು ಬದುಕಿನಲ್ಲಿ ಉನ್ನತಿ ಸಾಧಿಸಲು ಶಿಸ್ತು ಮುಖ್ಯ. ಪರಿಶ್ರಮದಿಂದ ಅಧ್ಯಯನ ಮಾಡುವತ್ತ ವಿದ್ಯಾರ್ಥಿಗಳು ಹೆಚ್ಚು ಗಮನ ನೀಡಬೇಕು. ತಾಳ್ಮೆ, ಸಂಯಮ, ಆಹಾರ ಪದ್ಧತಿ ಉತ್ತಮ ಜೀವನಕ್ಕೆ ಬುನಾದಿಯಾಗುತ್ತದೆ.ನಾಯಕತ್ವ ಸೇರಿದಂತೆ ಜೀವನದಲ್ಲಿ ಶಿಸ್ತನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲು ರೋವರ್ಸ್‌ ಮತ್ತು ರೇಂಜರ್ಸ್‌ ಸಂಘಟನೆ ಮಹತ್ತರ ಪಾತ್ರ ವಹಿಸುತ್ತಿದೆ. ಇಂತಹ ಸಂಸ್ಥೆಗಳು ಜೀವನ ಪಾಠ ಬೋಧಿಸುತ್ತವೆ ಎಂದು ಭಾರತ್ ಸ್ಕೌಟ್ ಅಂಡ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಮತ್ತು ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ ಪಿ.ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಯೋಜನಾ ಆಯುಕ್ತ ಭರತ್‌ರಾಜ್ ಕೆ., ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಮಾಧವ ಬಿ.ಕೆ, ಉಪಾಧ್ಯಕ್ಷ ದಾಮೋದರ ನೇರಳ, ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ರಂಗಯ್ಯ ಶೆಟ್ಟಿಗಾರ್, ರೋವರ್ಸ್‌ ಲೀಡರ್ ಮನೋಹರ, ರೇಂಜರ್ ಲೀಡರ್‌ಗಳಾದ ಪ್ರಮೀಳಾ ಎನ್ ಹಾಗೂ ಅಶ್ವಿನಿ ಎಸ್.ಎನ್ ವೇದಿಕೆಯಲ್ಲಿದ್ದರು.

ರೋವರ್ಸ್ ಮತ್ತು ರೇಂಜರ್ಸ್‌ನ ನಿಪುನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪಿ.ಜಿ.ಆರ್ ಸಿಂಧ್ಯಾ ಪ್ರಶಸ್ತಿ ಪ್ರದಾನ ಮಾಡಿದರು. ರೋವರ್ಸ್‌ ಲೀಡರ್ ರಾಮ್‌ಪ್ರಸಾದ್ ನಿರೂಪಿಸಿದರು. ಕಾಲೇಜಿನ ಎಲ್ಲಾ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net