ಕುಕ್ಕೆ ಜಾಗದಲ್ಲಿದ್ದ ಕಟ್ಟಡ ತೆರವು

Sub_Evacuation
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಸಂಬಂಧಿಸಿದ ಜಾಗವೊಂದು ನ್ಯಾಯಾಲಯದ ಮುಖಾಂತರ ಮತ್ತೆ ದೇವಾಲಯಕ್ಕೆ ಸುಪರ್ದಿಗೆ ಬಂದಿದ್ದು ಅದರಲ್ಲಿದ್ದ ಕಟ್ಟಡ ತೆರವು ಕಾರ್ಯಾಚರಣೆ ಶನಿವಾರ ನಡೆಯಿತು.

ಕಾಶಿಕಟ್ಟೆ ರಥಬೀದಿಯ ನಡುವಿನ ಅಂಚೆ ಕಚೇರಿ ಮುಂಭಾಗ ಜಾಗದ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹಾಗೂ ಕುಂಞಕ್ಕ ಎಂಬುವವರಿಗೆ ತಕರಾರು ಇತ್ತು. ಈ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು, ಜಾಗವು ದೇವಾಲಯಕ್ಕೆ ಸಂಬಂಧಿಸಿದೆಂದು ನ್ಯಾಯಾಲಯವು ಆದೇಶ ನೀಡಿತ್ತು. ಇದರನ್ವಯ ಕಂದಾಯ ಇಲಾಖೆಯ ವತಿಯಿಂದ ಜಾಗದ ಹಕ್ಕನ್ನು ದೇವಾಲಯಕ್ಕೆ ಹಸ್ತಾಂತರಿಸಿದ್ದು ,ಜಾಗದಲ್ಲಿದ್ದ ಹಳೇ ಕಟ್ಟಡ ತೆರವು ಕಾರ್ಯಾಚರಣೆ ನಡೆಯಿತು. ದೇವಾಲಯದ ಅಧಿಕಾರಿಗಳು, ಸಿಬ್ಬಂದಿ, ಭದ್ರತಾ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net