ವಿಪತ್ತು ನಿರ್ವಹಣೆ ಕಲ್ಪಿತ ಪ್ರದರ್ಶನ

ಗಂಗಾವತಿಯ ಬಾಲಕರ ಜ್ಯೂನಿಯರ್ ಕಾಲೇಜಿಗೆ ಎನ್‌ಡಿಆರ್‌ಎ್ ತಂಡದಿಂದ ವಿಪತ್ತು ನಿರ್ವಹಣೆಗಾಗಿ ಶಾಲಾ ಸುರಕ್ಷತಾ ಕಾರ್ಯಕ್ರಮದಡಿ ಸುರಕ್ಷತಾ ಕಿಟ್ ವಿತರಿಸಲಾಯಿತು. ತಂಡದ ಪಿಐ ಅಜಯಕುಮಾರ, ಸದಸ್ಯರಾದ ಸೋಮ್ ವೀರಕುಮಾರ್, ವಜ್ರಚೇತನ, ಉಪನ್ಯಾಸಕಿ ಲಲಿತಾ ಕಂದಗಲ್ ಇತರರಿದ್ದರು.
ಗಂಗಾವತಿಯ ಬಾಲಕರ ಜ್ಯೂನಿಯರ್ ಕಾಲೇಜಿಗೆ ಎನ್‌ಡಿಆರ್‌ಎ್ ತಂಡದಿಂದ ವಿಪತ್ತು ನಿರ್ವಹಣೆಗಾಗಿ ಶಾಲಾ ಸುರಕ್ಷತಾ ಕಾರ್ಯಕ್ರಮದಡಿ ಸುರಕ್ಷತಾ ಕಿಟ್ ವಿತರಿಸಲಾಯಿತು. ತಂಡದ ಪಿಐ ಅಜಯಕುಮಾರ, ಸದಸ್ಯರಾದ ಸೋಮ್ ವೀರಕುಮಾರ್, ವಜ್ರಚೇತನ, ಉಪನ್ಯಾಸಕಿ ಲಲಿತಾ ಕಂದಗಲ್ ಇತರರಿದ್ದರು.
Published on

ಗಂಗಾವತಿ: ನಗರದ ಬಾಲಕರ ಜ್ಯೂನಿಯರ್ ಕಾಲೇಜಿನಲ್ಲಿ ಎನ್‌ಡಿಆರ್‌ಎ್ ತಂಡದಿಂದ ಬುಧವಾರ ವಿಪತ್ತು ನಿರ್ವಹಣೆ ಕಲ್ಪಿತ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂಭವನೀಯ ಅತಿವಷ್ಠಿ, ಅನಾವಷ್ಠಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಪ್ರಥಮ ಚಿಕಿತ್ಸೆ, ಪ್ರವಾಹ ರಕ್ಷಣೆ, ಪ್ರಕತಿ ವಿಕೋಪದಿಂದ ಆಗುವ ಅನಾಹುತ, ಅನಿಲ ಸೋರಿಕೆ ತಡೆಗಟ್ಟುವಿಕೆ, ಸುನಾಮಿ, ಭೂಕಂಪ, ಅಗ್ನಿ ಅವಘಡ, ಸಿಡಿಲು ಬಡಿತದಿಂದ ರಕ್ಷಣೆ, ಕಟ್ಟಡ ಕುಸಿತ, ರಾಸಾಯನಿಕ ಪದಾರ್ಥಗಳಿಂದ ಅಪಾಯವಾದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎನ್‌ಡಿಆರ್‌ಎ್ ತಂಡದ ಸದಸ್ಯ ಶಂಕದ ಧೂಪದಲ್ ಮಾಹಿತಿ ನೀಡಿದರು. ಕಾಲೇಜಿಗೆ ಶಾಲಾ ಸುರಕ್ಷತಾ ಕಾರ್ಯಕ್ರಮದಡಿ 25ಸಾವಿರ ರೂ. ಮೌಲ್ಯದ ಸುರಕ್ಷತಾ ಕಿಟ್ ವಿತರಿಸಲಾಯಿತು.

ತಂಡದ ಪಿಐ ಅಜಯಕುಮಾರ, ನಗರಸಭೆ ಅಧ್ಯಕ್ಷ ಮಾಲಸಾಬ್ ದಾದೇಸಾಬ್, ವ್ಯವಸ್ಥಾಪಕ ಷಣ್ಮುಖಪ್ಪ, ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಉಮಾಪಾಟೀಲ್, ಪ್ರಾಚಾರ್ಯ ಬಸಪ್ಪ ನಾಗೋಲಿ, ಮುಖ್ಯಶಿಕ್ಷಕ ಬಸವರಾಜಯ್ಯ, ತಂಡದ ಸದಸ್ಯರಾದ ಸೋಮ್ ವೀರಕುಮಾರ್, ವಜ್ರಚೇತನ, ಗಂಗಾಧರ ಚಿಕ್ಕೋಡಿ, ಕರುಣಾಮೂರ್ತಿ, ಶಶಿಕಾಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net