ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಗಮದ ಮುಖ್ಯ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಬಸವರಾಜ್ ಆರ್ ಕಬಾಡೆ ಅವರನ್ನು ವರ್ಗಾಯಿಸಿದ್ದು, ಬಿಬಿಎಂಪಿ ದಾಸರಹಳ್ಳಿ ವಲಯದ ಮುಖ್ಯ ಅಭಿಯಂತರ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಜತೆಗೆ ಹಾಲಿ ವಹಿಸಿರುವ ಆರೋಗ್ಯ ಹಾಗೂ ನೈರ್ಮಲ್ಯ ವಿಭಾಗದ ಮುಖ್ಯ ಅಭಿಯಂತರ ಹುದ್ದೆಯನ್ನೂ ಮುಂದುವರಿಸಲಾಗಿದೆ.
ತೆರವಾದ ನಿಗಮದ ಮುಖ್ಯಸ್ಥರ ಸ್ಥಾನಕ್ಕೆ ಪಾಲಿಕೆಯ ಮುಖ್ಯ ಅಭಿಯಂತರ (ಯೋಜನೆ – ಕೇಂದ್ರ) ಎಂ.ಲೋಕೇಶ್ ಅವರನ್ನು ಪ್ರಭಾರ ಹುದ್ದೆಯಲ್ಲಿ ನಿಯೋಜಿಸಲಾಗಿದೆ. ಇನ್ನೊಬ್ಬ ಅಧಿಕಾರಿ ಕೆ.ವಿ.ರವಿ ಅವರನ್ನು ಮಹದೇವಪುರ ವಲಯದ ಮುಖ್ಯ ಅಭಿಯಂತರ ಹುದ್ದೆಗೆ ವರ್ಗಾಯಿಸಿ ಬಿಬಿಎಂಪಿಯ ವಿಶೇಷ ಆಯುಕ್ತರು (ಆಡಳಿತ) ಆದೇಶ ಹೊರಡಿಸಿದ್ದಾರೆ.