

ಬೆಟ್ಟದಪುರ: ಗೊರಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಜೆಡಿಎಸ್ ಬೆಂಬಲಿತ ಹತ್ತು ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ಬೆಂಬಲಿತ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಜೆಡಿಎಸ್ ಬೆಂಬಲಿತರಾದ ಉದಯ್ ಜಿ.ಎಸ್, ಅನಿಲ್ ಕುಮಾರ್, ಸೌಮ್ಯಾ ಬಿ.ವಿ, ರಮೇಶ್ ಜಿ.ಸಿ, ಮಲ್ಲೇಶ್, ನಿಂಗಯ್ಯ, ಹರೀಶ್ ಜಿ.ಆರ್, ನಾಗರಾಜು ಎಸ್, ಯಶೋದಮ್ಮಾ, ಸಾವಿತ್ರಮ್ಮ ಹಾಗೂ ಕಾಂಗ್ರೆಸ್ ಬೆಂಬಲಿತರಾದ ಕನಕಾ ಜಿ.ಈ ಆಯ್ಕೆಯಾದರೆ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ರಾಮನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ರಘು ಕೆ.ಸಿ ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಪಿ ಸುರೇಶ್ ಮೀನಾಕ್ಷಿ ಯೋಗೇಶ್, ಸಂಘದ ಸಿಇಒ ಈ.ಗಣೇಶಚಾರಿ, ಜೆಡಿಎಸ್ ಮುಖಂಡರಾದ ಪುನೀತ್, ಬಿಜೆಪಿ ಅಶ್ವಥ್, ಜಯಲಿಂಗಪ್ಪ, ಸುರಗಹಳ್ಳಿ ವಿದ್ಯಾಶಂಕರ್, ಮಂಜು ಮಾಸ್ಟರ್, ನಟರಾಜು, ಕೃಷ್ಣನಾಯಕ, ನಟರಾಜು ಜಿ ಆರ್, ಬೇಕರಿ ಹರೀಶ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಇದ್ದರು.
26ಬಿಟಿಪಿ01: ಗೊರಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತ ಹತ್ತು ಅಭ್ಯರ್ಥಿಗಳು ನಿರ್ದೇಶಕರನ್ನು ಅಭಿನಂದಿಸಲಾಯಿತು. ಚಪ್ಪರದಹಳ್ಳಿ ಗ್ರಾ ಪಂ ಸದಸ್ಯರಾದ ಸಿ.ಪಿ ಸುರೇಶ್ ಮೀನಾಕ್ಷಿ ಯೋಗೇಶ್, ಸಂಘದ ಸಿಇಓ ಈ.ಗಣೇಶಚಾರಿ, ಜೆಡಿಎಸ್ ಮುಖಂಡರಾದ ಪುನೀತ್, ಬಿಜೆಪಿ ಅಶ್ವಥ್, ಜಯಲಿಂಗಪ್ಪ, ಸುರಗಹಳ್ಳಿ ವಿದ್ಯಾಶಂಕರ್, ಮಂಜು ಮಾಸ್ಟರ್, ನಟರಾಜು, ಕೃಷ್ಣನಾಯಕ, ನಟರಾಜು ಜಿ ಆರ್, ಬೇಕರಿ ಹರೀಶ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಇದ್ದರು.