

ಬನ್ನೂರು: ಪಟ್ಟಣದ ಸಮೀಪದ ಸೋಮನಾಥಪುರ ಪಿಎಸಿಎಸ್‌ಗೆ 6 ಜನ ನಿರ್ದೇಶಕರು ಚುನಾವಣೆಯ ಮೂಲಕ ಮತ್ತು 6 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು.
ಮುಂದಿನ 5 ವರ್ಷದ ಅವಧಿಗೆ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ 255 ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ 38 ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸಿದರು. 6 ನಿರ್ದೇಶಕರು ಚುನಾವಣೆಯ ಮೂಲಕ ಆಯ್ಕೆಯಾದರೆ, 6 ಜನರು ಅವಿರೋಧವಾಗಿ ಆಯ್ಕೆಯಾದರು.
ಸಾಲಗಾರರ ಕ್ಷೇತ್ರದಿಂದ ಕೆ.ಎಂ.ಚಂದ್ರಶೇಖರ್, ಎಸ್.ನಾಗರಾಜು, ಆರ್.ರಂಗಸ್ವಾಮಿ, ಗಿರೀಶ್‌ಗೌಡ, ಎಂ.ಮಹದೇವು ಜಯ ಗಳಿಸಿದರೆ, ಸಾಲಗಾರರಲ್ಲದ ಕ್ಷೇತ್ರದಿಂದ ಉಷಾ ಗೆಲುವು ಸಾಧಿಸಿದರು. ಇನ್ನುಳಿದ 6 ಕ್ಷೇತ್ರಕ್ಕೆ ಅವಿರೋಧವಾಗಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಸ್ಥಾನಕ್ಕೆ ಎಂ.ಸಿದ್ದರಾಜು, ಹಿಂದುಳಿದ ವರ್ಗ ಬಿ ಯಿಂದ ಡಿ.ಶಿವಣ್ಣ, ಹಿಂದುಳಿದ ವರ್ಗ ಎ ಯಿಂದ ಮರಮ್ಮ, ಮಹಿಳಾ ಮೀಸಲು ಸ್ಥಾನಕ್ಕೆ ಸುಂದ್ರಮ್ಮ, ಪರಿಶಿಷ್ಟ ಜಾತಿಗೆ ಮೀಸಲಾದ ಸ್ಥಾನಕ್ಕೆ ಸಿ.ನಂಜುಂಡಯ್ಯ ಆಯ್ಕೆಯಾದರೆ, ಸಾಲಗಾರರಲ್ಲದ ಕ್ಷೇತ್ರದಿಂದ ಮಹಿಳಾ ಮೀಸಲಿನಡಿ ಅನುಸೂಯ ಆಯ್ಕೆಯಾದರು.
ಚುನಾವಣಾಧಿಕಾರಿ ಅಶ್ವಿನ್‌ಕುಮಾರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಕಾರ್ಯದರ್ಶಿ ಪ್ರದೀಪ್, ನಿರ್ದೇಶಕರಾದ ಗಿರೀಶ್‌ಗೌಡ, ಕೆ.ಎಂ.ಚಂದ್ರಶೇಖರ್, ಎಸ್.ನಾಗರಾಜು, ಎಂ.ಮಹದೇವು, ಆರ್.ರಂಗಸ್ವಾಮಿ, ಲೋಕೇಶ್, ಉಷಾ, ಅನಸೂಯಾ ಕೃಷ್ಣೇಗೌಡ, ಸುಂದ್ರಮ್ಮ, ಸಿ.ನಂಜುಂಡಯ್ಯ, ಎಂ.ಸಿದ್ದರಾಜು, ಶಿವಣ್ಣ, ಮರಮ್ಮ, ಆರ್.ಕೃಷ್ಣೇಗೌಡ, ಪುಟ್ಟೇಗೌಡ, ಕಗ್ಗಲಿಪುರ ರಾಮಚಾರಿ, ರಮೇಶ್, ಶ್ರೀಧರ್, ಸಂದಿ ಪುಟ್ಟಸ್ವಾಮಿ, ಡೆಲ್ಲಿ ರಾಮಣ್ಣ, ಗಣೇಶ್, ಶ್ರೀನಿವಾಸಗೌಡ, ಶಿವು, ಬೋರಣ್ಣ, ಸಿದ್ದೇಗೌಡ, ರಂಗಸ್ವಾಮಿ, ಉಕ್ಕಲಗೆರೆ ಕರಿಯಪ್ಪ, ಕಗ್ಗಲಿಪುರ ರಾಮಲಿಂಗು, ಸುಬ್ಬೇಗೌಡ, ಬಾಬು, ವಿನೋದ್‌ಕುಮಾರ್, ಉಕ್ಕಲಗೆರೆ ಶಿವು, ಪುಟ್ಟಸ್ವಾಮಿ, ರಾಜೇಶ್, ದಯಾನಂದ್ ಪಟೇಲ್, ರಾಮಲಿಂಗು, ಸಿವಸ್ವಾಮಿ, ಸುಬ್ಬೇಗೌಡ, ನಾಗರಾಜು, ಮಹೇಶ್ ಉಪಸ್ಥಿತರಿದ್ದರು.