ಮಾರ್ಚ್ 18 ರಂದು ನೇರ ಸಂದರ್ಶನಕ್ಕೆ ಆಹ್ವಾನ

job 1
Published on

ಯಾದಗಿರಿ : ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿವತಿಯಿಂದ 2025ರ ಮಾರ್ಚ್ 18ರ ಮಂಗಳವಾರ ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನೇರ ಸಂದರ್ಶನ ಆಯೋಜಸಲಾಗಿದೆ ಎಂದು ಉದ್ಯೋಗಾಧಿಕಾರಿ ಬಸವರಾಜ ಅವರು ತಿಳಿಸಿದ್ದಾರೆ.

ಜಿ4ಎಸ್ ಸೆಕ್ಯೂರಿಟಿ ಸೋಲುಷನ್ಸ್ ಪ್ರೆöÊ.ಲಿ (ಅ) ಸೆಕ್ಯೂರಿಟಿ ಗಾರ್ಡ್ 15 ಹುದ್ದೆಗಳು ಖಾಲಿ ಇದ್ದು, ಅರ್ಹತೆ 10ನೇ ಪಾಸ್.ಜಿ.ಪವರ ಇಂಡಿಯಾ ಲಿ.ಶಹಾಬಾದ್, ಓರಿಯಂಟ್ ಸಿಮೆಂಟ್ ಲಿ.ಚಿತ್ತಾಪೂರು ಉದ್ಯೋಗ ಸ್ಥಳವಾಗಿದೆ, ಪುರುಷ ಅಭ್ಯರ್ಥಿಗಳು ಮಾತ್ರ ಭಾಗಹಿಸಬಹುದಾಗಿದೆ. 22 ರಿಂದ 35 ವರ್ಷ (ಅನುಭವ ಇರುವವರಿಗೆ 45 ವರ್ಷ) ಒಳಗಿರಬೇಕು. (ಆ) ಸೆಕ್ಯೂರಿಟಿ ಸೂಪರ್‌ವೈಜರ್ 02 ಹುದ್ದೆಗಳು ಖಾಲಿ ಇದ್ದು, ಅರ್ಹತೆ 12ನೇ ಪಾಸ್, ಶಹಾಬಾದ್, ಚಿತ್ತಾಪೂರು ಉದ್ಯೋಗ ಸ್ಥಳವಾಗಿದೆ. 30 ರಿಂದ 45 ವರ್ಷ ಒಳಗಿರಬೇಕು, (5 ವರ್ಷ ಅನುಭವ ಕಡ್ಡಾಯ) ಪುರುಷ ಅಭ್ಯರ್ಥಿಗಳು ಮಾತ್ರ ಭಾಗಹಿಸಬೇಕು. ಶಹಾಬಾದ, ಚಿತ್ತಾಪೂರು ಕಂಪನಿಯಿAದ 50 ಕಿ.ಮೀ. ಅಂತರವಿರುವ ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ. ಇ.ಎಸ್.ಐ.ಪಿ.ಎಫ್. ಬೋನಸ್, ಗ್ರಾಚ್ಯಟಿ, ಇನ್ಸುರೆನ್ಸ್, ಸೌಲಭ್ಯವಿರುತ್ತದೆ. ಸೇವ್ ಮೈಕ್ರೋಫೈನಾನ್ಸ್ ಪ್ರೆöÊ.ಲಿ. (ಅ) ಫೀಲ್ಡ್ ಆಫಿಸರ್ 30 ಹುದ್ದೆಗಳು ಖಾಲಿ ಇದ್ದು, ಅರ್ಹತೆ 10ನೇ, ಪಿಯುಸಿ, ಐಟಿಐ, ಡಿಪ್ಲೋಮ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಶಹಾಪೂರು, ಸುರಪುರ, ಸೇಡಂ, ಲಿಂಗಸೂಗುರು, ಕಲಬುರಗಿ ಉದ್ಯೋಗ ಸ್ಥಳವಾಗಿದೆ. 18 ರಿಂದ 32 ವರ್ಷ ಒಳಗಿರಬೇಕು. ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.

ಬ್ರಾö್ಯಂಚ್ ಮ್ಯಾನೇಜರ್ 03 ಹುದ್ದೆಗಳು ಖಾಲಿ ಇದ್ದು ಹುದ್ದೆಗೆÀ ಅರ್ಹತೆ ಪಿಯುಸಿ, ಯಾವುದೇ ಪದವಿ, ಸುರಪುರ, ಸಿರಗುಪ್ಪ, ರಾಯಚೂರು ಉದ್ಯೋಗ ಸ್ಥಳವಾಗಿದೆ. 21 ರಿಂದ 35 ವರ್ಷ ಒಳಗಿರಬೇಕು, (ಬ್ರಾö್ಯಂಚ್ ಮ್ಯಾನೇಜರ್ 1 ವರ್ಷ ಅನುಭವ ಕಡ್ಡಾಯ) ಪುರುಷ ಅಭ್ಯರ್ಥಿಗಳು ಮಾತ್ರ ಭಾಗವಹಿಸಬೇಕು, ಬೈಕ್ ಮತ್ತು ಡಿ.ಎಲ್.ಕಡ್ಡಾಯವಾಗಿದೆ, ನಿರುದ್ಯೋಗಿ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಈ ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ದಾಖಲಾತಿಗಳೊಂದಿಗೆ ವ್ಯಕ್ತಿ ಪರಿಚಯ ರಿಸ್ಯೂಮ್, ಬಯೋಡಾಟಾದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಹಾಗೂ ನೇರ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ನೇರ ಸಂದರ್ಶನ ನಡೆಯುವ ಸ್ಥಳ ಹೆಚ್ಚಿನ ಮಾಹಿತಿಗಾಗಿ ಚಿತ್ತಾಪೂರು ರೋಡ್ (ಮಿನಿ ವಿಧಾನ ಸೌಧ) ಜಿಲ್ಲಾಡಳಿತ ಭವನ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬಿ-ಬ್ಲಾಕ್ ರೂ.ನಂ.ಬಿ1, ಬಿ2 2ನೇ ಮಹಡಿ ಯಾದಗಿರಿ ದೂ.ಸಂ.08473253718 ಮೊ.ನಂ.9448566765ಗೆ ಕಛೇರಿಯ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net