ನೇರ ನೇಮಕಾತಿಗೆ ಆಗ್ರಹಿಸಿ ಮನವಿ

31GKK2
Published on

ಗೋಕಾಕ: ನೀರು ಸರಬರಾಜು ನೌಕರರನ್ನು ನೇರ ನೇಮಕಾತಿಗೊಳಿಸುವಂತೆ ಆಗ್ರಹಿಸಿ ರಾಜ್ಯ ನೀರು ಸರಬರಾಜು ಹೊರಗುತ್ತಿಗೆ ನೌಕರರ ಸಂದ ಪದಾಧಿಕಾರಿಗಳು ತಹಸೀಲ್ದಾರ್​ ಮೂಲಕ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಿದರು.

ಕಳೆದ 25 ವರ್ಷಗಳಿಂದ ನೀರು ಸರಬರಾಜು ನೌಕರರನ್ನು ಹೊರಗುತ್ತಿಗೆ ಅಡಿ ದುಡಿಸಿಕೊಳ್ಳುತ್ತಿದ್ದು, ಯಾವುದೇ ಸೇವಾ ಭದ್ರತೆ ನೀಡಿಲ್ಲ. ಇದರಿಂದಾಗಿ ನಮ್ಮ ಕುಟುಂಬಗಳು ದುಸ್ಥಿತಿಯಲ್ಲಿವೆ. ಶ್ರೀ ನೇರ ನೇಮಕಾತಿ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ನೀರು ಸರಬರಾಜು ಸೇವೆ ಸ್ಥಗಿತಗೊಳಿಸಿ ಮುಷ್ಕರ ಕೈಗೊಳ್ಳುವುದಾಗಿ ತಿಳಿಸಿದರು.

ಜಯೇಶ ತಾಂಬೊಳೆ, ಆನಂದ ಕಪರಟ್ಟಿ, ಶೆಟ್ಟೆಪ್ಪ ಕಳ್ಳಿಮನಿ, ಸತೀಶ ಮಾಸ್ತಮರಡಿ, ಉಮಾಜಿ ಬೆಳಗಾಂವಕರ, ಶ್ರೀಕಾಂತ ಕಳ್ಳಿಮನಿ, ಅರುಣ ಮಾದರ, ಪ್ರಶಾಂತ ಕೊಣ್ಣೂರ, ಕಾಡೇಶ ಹೂಲಿಕಟ್ಟಿ, ಪರಶುರಾಮ ಪ್ರಭುಗೋಳ, ಮಾರುತಿ ಪ್ರಭುಗೋಳ, ಲಕ್ಷಿ$್ಮಕಾಂತ ಹಿರಗನ್ನವರ, ಜಗದೀಶ ತಳಗಿನಮನಿ, ಮಾರುತಿ ಪೂಜೇರಿ, ಯಲ್ಲಪ್ಪ ಆನೆಗೌಡರ -ಇ-ತ-ರ-ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net