ಕಷ್ಟಗಳನ್ನು ಎದುರಿಸುವ ಶಕ್ತಿ ರೂಢಿಸಿಕೊಳ್ಳಿ

22 Ylb 03
ಯಲಬುರ್ಗಾ ತಾಲೂಕಿನ ಕರಮುಡಿ ಶ್ರೀ ಕರವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಗಜಗಿನಹಾಳದ ವೀರೇಶ ಶಾಸ್ತ್ರಿ, ಯರಗೇರಾದ ಚಂದಾಲಿಂಗಯ್ಯ ಹಿರೇಮಠ, ವೀರಭದ್ರಯ್ಯ ಕೆಂಬಾವಿಮಠ ಇದ್ದರು.
Published on

ಯಲಬುರ್ಗಾ; ಪ್ರತಿಯೊಬ್ಬರೂ ಬದುಕಿನಲ್ಲಿ ಆಧ್ಯಾತ್ಮಿಕ ಮನೋಭಾವ ಬೆಳೆಸಿಕೊಂಡಾಗ ಜೀವನ ಸುಸೂತ್ರವಾಗಿ ನಡೆಯುತ್ತದೆ ಎಂದು ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಕರಮುಡಿ ಗ್ರಾಮದ ಶ್ರೀ ಕರವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಪುರಾಣ ಪ್ರವಚನದಲ್ಲಿ ಶುಕ್ರವಾರ ಮಾತನಾಡಿದರು.

ಮನುಷ್ಯನ ಬದುಕಿನಲ್ಲಿ ಕಷ್ಟಗಳು ಸಹಜ. ಅವುಗಳನ್ನು ಸ್ವೀಕರಿಸುವ ಮೂಲಕ ಎದುರಿಸುವ ಶಕ್ತಿ ರೂಢಿಸಿಕೊಳ್ಳಬೇಕು. ಕರಮುಡಿ ಗ್ರಾಮದಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮ ಜರುಗುತ್ತಿದ್ದು, ಅವುಗಳ ಸದುಪಯೋಗ ಪಡೆದು ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗಣ್ಯರಾದ ಗಜಗಿನಹಾಳದ ವೀರೇಶ ಶಾಸ್ತ್ರಿ, ಯರಗೇರಾದ ಚಂದಾಲಿಂಗಯ್ಯ ಹಿರೇಮಠ, ವೀರಭದ್ರಯ್ಯ ಕೆಂಬಾವಿಮಠ, ವಿರೂಪಾಕ್ಷಪ್ಪ ಉಳ್ಳಾಗಡ್ಡಿ, ಗಂಗಪ್ಪ ಹವಳಿ, ಶಕುಂತಲಾ ಪಾಟೀಲ್, ಶರಣಗೌಡ ಪಾಟೀಲ್, ಚನ್ನಬಸಪ್ಪ ಗೊಂಗಡಶೆಟ್ಟಿ, ವೀರಣ್ಣ ನಿಂಗೋಜಿ, ಬಸವರಾಜ ಬಲಕುಂದಿ, ಉಮೇಶ ಕುಕನೂರು, ಮರ್ದಾನ್‌ಸಾಬ್ ಮುಲ್ಲಾ, ವೀರಣ್ಣ ಪಟ್ಟೇದ, ಕಳಕಪ್ಪ ಬೆಟಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net