More

  ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ವಾರ್ಷಿಕೋತ್ಸವ  ಮಂಗಳೂರು : ಮಕ್ಕಳಲ್ಲಿ ಯಾವುದಾದರೂ ಮಾನಸಿಕ ಸಮಸ್ಯೆಗಳು ಮಕ್ಕಳಲ್ಲಿ ಕಂಡುಬಂದರೆ ಅದರ ಬಗ್ಗೆ ಭಯ ಪಡದೆ
  ಸರಿಯಾದ ಪರಿಹಾರ ಮಾರ್ಗವನ್ನು ಅನುಸರಿಸಬೇಕು . ಮಾನಸಿಕ ಒತ್ತಡದ ನಿವಾರಣೆಗೆ ಭಗವದ್ಗೀತೆ ಪಠಣ ಹಾಗೂ ಯೋಗವನ್ನು
  ರೂಢಿಸಿಕೊಳ್ಳುವುದು ಉತ್ತಮ ಎಂದು ನಿಟ್ಟೆ ವೈದ್ಯಕೀಯ ಕಾಲೇಜಿನ ಮನಶ್ಯಾಸ್ತ್ರ ವಿಭಾಗದ ಹಿರಿಯ ಪ್ರೊಫೆಸರ್ ಡಾ. ಸತೀಶ ರಾವ್ ಹೇಳಿದರು.
  ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಥಮಿಕ ವಿಭಾಗದ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಶಾರೀರಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಬಹಳ
  ಮುಖ್ಯ. ಪಾಲಕರು ಮೂಲಕ ಮಕ್ಕಳಲ್ಲಿ ಮಾನಸಿಕ ದೃಢತೆಯನ್ನು ಬೆಳೆಸಬೇಕು ಎಂದರು.
  ಸಂಸ್ಥೆಯ ಸಂಸ್ಥಾಪಕ ಡಾ. ಕೆ. ಸಿ.ನಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಲಹೆಗಾರ ರಮೇಶ ಕೆ , ಶಕ್ತಿ ಪ.ಪೂ ಕಾಲೇಜಿನ ಪ್ರಾಂಶುಪಾಲ ವೆಂಕಟೇಶಮೂರ್ತಿ, ಶಕ್ತಿ ವಸತಿ ಶಾಲೆ ಪ್ರಾಂಶುಪಾಲ ರವಿಶಂಕರ ಹೆಗಡೆ, ಶಕ್ತಿ ಪೂರ್ವಪ್ರಾಥಮಿಕ ಶಾಲೆ ಸಂಯೋಜಕಿ ಪೆಟ್ರಿಷಿಯಾ ಪಿಂಟೊ ಉಪಸ್ಥಿತರಿದ್ದರು.
  ಶಿಕ್ಷಕಿ ಚೈತ್ರಾ ಅತಿಥಿ ಪರಿಚಯ ಮಾಡಿದರು. ಸಹ ಶಿಕ್ಷಕಿ ಚೇತನಾ ವಾರ್ಷಿಕ ವರದಿ ವಾಚಿಸಿದರು, ಶಿಕ್ಷಕಿಯರಾದ ಡೋನಿಕಾ
  ಸ್ವಾಗತಿಸಿ, ಪ್ರಿಯದರ್ಶಿನಿ ವಂದಿಸಿದರು. ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts