ಶಿರಸಿಯ ಬಾವಿಯಲ್ಲಿ ಡೀಸೆಲ್‌ ಪತ್ತೆ!!

diesel-in-well.
Published on

ಶಿರಸಿ: ಕುಡಿಯುವ ನೀರಿನ ಬಾವಿಯಲ್ಲಿ ಡಿಸೇಲ್ ಮಿಶ್ರಿತ ನೀರು ಪತ್ತೆಯಾಗಿದೆ. ನಗರದ ಕೋಟೆಗಲ್ಲಿಯ ಸೌದಾಗರ ಓಣಿಯ ಗುರುವಾರ ಈ ರೀತಿ ಆಗಿದ್ದು, ನೀರನ್ನು ಬಳಸದಂತೆ ಸೂಚನೆ ನೋಟಿಸ್‌ ಹಚ್ಚಿದ್ದಾರೆ.
ಜನರು ಭಯಭೀತರಾಗಿದ್ದು, ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧಿಕಾರಿಗಳು ನೀರನ್ನು ಬಳಸದಂತೆ ಸೂಚನಾ ಫಲಕ ಅಂಟಿಸಿದ್ದಾರೆ. ಹತ್ತಿರದಲ್ಲೇ ಪೆಟ್ರೋಲ್ ಬಂಕ್ ಗಳು ಇರುವುದರಿಂದ ಅಲ್ಲಿಂದ ಡಿಸೇಲ್ ಸೋರಿಕೆ ಯಾಗಿರಬಹುದು ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net