ಕಾಲುಜಾರಿ ಹೊಳೆಗೆ ಬಿದ್ದು ಸಾವು

death
ರಾಜು ಮರಕಾಲ
Published on

ಕೋಟ: ಬ್ರಹ್ಮಾವರ ತಾಲೂಕಿನ ಸಾಸ್ತಾನದ ಕೋಡಿ ಗ್ರಾಮದಲ್ಲಿ ಕೋಟದ ನಿವಾಸಿ ಪ್ರಸ್ತುತ ಸಾಸ್ತಾನ ಯಕ್ಷಿಮಠ ನಿವಾಸಿ ರಾಜು ಮರಕಾಲ(66) ಹೊಳೆಗೆ ಮಳಿ ಚಿಪ್ಪು ತೆಗೆಯಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಗುರುವಾರ ಸಂಜೆ ಹೊಳೆಯಲ್ಲಿ ಮಳಿ ಚಿಪ್ಪು ತೆಗೆಯಲು ಹೋದವರು ಕಾಣೆಯಾಗಿದ್ದು, ಶನಿವಾರ ಬೆಳಗ್ಗೆ ಕೋಡಿ ಹೊಳೆಯಲ್ಲಿ ಶವ ತೇಲುತ್ತಿರುವುದನ್ನು ಕಂಡು ಸ್ಥಳೀಯ ಮೀನುಗಾರರು ಕೊಡಲೇ ಕೋಟ ಪೊಲೀಸ್ ಠಾಣೆಗೆ ಹಾಗೂ ಸ್ಥಳೀಯ ಗ್ರಾಪಂ ಮಾಹಿತಿ ನೀಡಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net