ಸಿರವಾರ: ತಾಲೂಕಿನ ಐತಿಹಾಸಿಕ ಕೆಂಪು ಕಂತೆಯ ದಿಡ್ಡಿ ಬಸವೇಶ್ವರ ದೇವಸ್ಥಾನದ 59ನೇ ವಾರ್ಷಿಕ ಜಾತ್ರೋತ್ಸವ ನಿಮಿತ್ತ ಮೇ 6ರಂದು ಜೋಡಿ ರಥೋತ್ಸವ ಜರುಗಲಿದೆ ಎಂದು ದಿಡ್ಡಿ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೀರಭದ್ರಯ್ಯ ಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: ಲಕ್ಷ್ಮೀವೆಂಕಟರಮಣಸ್ವಾಮಿ ರಥೋತ್ಸವ ಸಂಪನ್ನ
ಮೇ 4ರಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು. ಮೇ 6ರಂದು ಮಹಾಪ್ರಸಾದ ಸೇವೆ ಹಾಗೂ ಸಂಜೆ 6ಕ್ಕೆ ಜೋಡಿ ರಥೋತ್ಸವ ಜರುಗಲಿದೆ. ಮೇ 7ಕ್ಕೆ ಕಡುಬಿನ ಕಾಳಗ, ಬಸವಣ್ಣನ ತೊಟ್ಟಿಲು ಸೇವೆ ಕಾರ್ಯಕ್ರಮ ಜರುಗಲಿದೆ. ವಿಶೇಷವಾಗಿ ಬೃಹತ ಜಾನುವಾರುಗಳ ಜಾತ್ರೆ, ಬಯಲಾಟ, ನಾಟಕಗಳು ಸಹ ಪ್ರದರ್ಶನ ಗೊಳ್ಳಲಿದೆ ಎಂದು ತಿಳಿಸಿದ್ದಾರೆ.