ಲಕ್ಷ್ಮೀವೆಂಕಟರಮಣಸ್ವಾಮಿ ರಥೋತ್ಸವ ಸಂಪನ್ನ

FotoJet (2)
Published on

ಎಂ.ಎನ್​.ಕೋಟೆ: ಗುಬ್ಬಿ ತಾಲೂಕಿನ ಇತಿಹಾಸ ಪ್ರಸಿದ್ಧ ಅಳಿಲಘಟ್ಟ ಗ್ರಾಮದ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಅದ್ದೂರಿಯಾಗಿ ನೆರವೇರಿತು.

ಬ್ರಹ್ಮರಥೋತ್ಸವ ಪ್ರಯುಕ್ತ ಬೆಳಗ್ಗೆ ದೇವಾಲಯದಲ್ಲಿ ಅಭಿಷೇಕ, ಪಂಚಾಮೃತ ಅಭಿಷೇಕ, ಸುಪ್ರಭಾತ ಸೇವೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಸಾಗಸಂದ್ರ ಶ್ರೀ ಕೆಂಪಮ್ಮ ದೇವಿಯ ಆಗಮನದೊಂದಿಗೆ ಬ್ರಹ್ಮರಥೋತ್ಸವ ನಡೆಯಿತು. ಸುಡು ಬಿಸಿಲು ಲೆಕ್ಕಿಸದೆ ಜೈ ಘೋಷಣೆ ಕೂಗುತ್ತಾ ಭಕ್ತರು ರಥವನ್ನು ಎಳೆದರು. ಭಕ್ತಾದಿಗಳಿಗೆ ಅಲಲ್ಲಿ ಫಾನಕ ಫಲಹಾರ ವಿತರಿಸಲಾಯಿತು. ವಾಡಿಕೆಯಂತೆ ಮಧ್ಯಾಹ್ನ ಆರಂಭವಾದ ರಥೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಬಾಳೆ ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು.

ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ್ದ ರಥೋತ್ಸವಕ್ಕೆ ದೇವರನ್ನು ಕೂರಿಸುತ್ತಿದಂತೆ ನೆರೆದಿದ್ದ ಭಕ್ತರ ಹಷೋರ್ದ್ಧಾರ ಮುಗಿಲು ಮುಟ್ಟಿತ್ತು. ರಥೋತ್ಸವದಲ್ಲಿ ನಗಾರಿವಾದ್ಯ, ಬಸವಣ್ಣನ ಉತ್ಸವ ನೋಡುಗರನ್ನು ಆಕರ್ಷಿಸುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net