ಜೀವನಕ್ಕೆ ಸಾಧಕರು ಮಾದರಿಯಾಗಲಿ : ಮನೋಹರ್ ಕುಂದರ್ ಆಶಯ

New Project (60)
Published on

ಮೂಲ್ಕಿ: ಯುವ ಜನತೆಯಲ್ಲಿ ಜೀವನದಲ್ಲಿ ಸಾಧನೆ ಮಾಡುವ ಛಲ ಬಹಳ ಮುಖ್ಯ.ಸಾಧಕರನ್ನು ಮಾದರಿಯಾಗಿಸಿ ಮುನ್ನಡೆದು ಜೀವನದಲ್ಲಿ ಅಭಿವೃದ್ಧಿ ಕಂಡುಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷ ಮನೋಹರ್ ಕುಂದರ್ ಹೇಳಿದರು.

ಕಲ್ಲಾಪು ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಆಯೋಜಿಸಲಾದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಡುಪಣಂಬೂರು ಕಾರ್ಯಕ್ಷೇತ್ರದ 10ನೇ ತೋಕೂರು ಒಕ್ಕೂಟದ ಸಭೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ವಿದ್ಯಾರ್ಥಿಗಳಾದ ಕೃತಿಕಾ, ಧನಿಶ್ ವಿ.ದೇವಾಡಿಗ, ಪೂರ್ವಿಕ್, ಆಯುಷ್ ಅವರನ್ನು ಗೌರವಿಸಲಾಯಿತು. ಯೋಜನೆಯ ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ಸೇವಾಪ್ರತಿನಿಧಿ ಸವಿತಾ ಶರತ್ ಬೆಳ್ಳಾಯರು, ಉಪಾಧ್ಯಕ್ಷ ಸತೀಶ್ ಶೆಟ್ಟಿಗಾರ್, ಕಾರ್ಯದರ್ಶಿ ವಾಣಿಶ್ರೀ ಮನೋಹರ್, ಕೋಶಾಧಿಕಾರಿ ಶುಭ ಹರೀಶ್, ಜತೆ ಕಾರ್ಯದರ್ಶಿ ದೀಕ್ಷಿತ ಶ್ಯಾಮ್, ಮಾಜಿ ಅಧ್ಯಕ್ಷೆ ಲತಾ ಸಂತೋಷ್, ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿಗಾರ್, ಗೀತಾ, ಹಿರಿಯರಾದ ಗುಲಾಬಿ, ಪಾಲಕರಾದ ತೇಜಾಕ್ಷಿ, ಶೈಲಜಾ, ಸೋಮಶೇಖರ ಹಾಗೂ ಒಕ್ಕೂಟ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net