ಯಾದಗಿರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಇಲ್ಲ,ಸಲ್ಲದ ಆರೋಪಗಳನ್ನು ಮಾಡಿ ದೇವರ ಮತ್ತು ಗುರುವಿನ ಹೆಸರಿಗೆ ಕಳಂಕ ತರಲು ಸತತವಾಗಿ ಯತ್ನಿಸುತ್ತಿರುವ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆಯೇ ಒತ್ತಾಯಿಸಿ ಜಿಲ್ಲೆಯಲ್ಲಿನ ಧರ್ಮಸ್ಥಳದ ಸಾವಿರಾರು ಭಕ್ತರು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನೇತಾಜಿ ಸರ್ಕಲ್ ದಿಂದ ಮೆರವಣಿಗೆ ಮೂಲಕ ಹೊರಟ ಅಪಾರ ಭಕ್ತರು ಸುಮಾರು ಎರಡು ಕಿಮೀ ದೂರದವರೆಗೆ ಸಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೇ ಜಮಾಯಿಸಿದರು.
ಈ ವೇಳೆ ಸೇರಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷೆ ನಾಗರತ್ನ ಅನಪುರ, ವೀರ ಭಾರತಿ ಪ್ರತಿಷ್ಠಾನದ ಅಧ್ಯಕ್ಷರೂ ಆದ ಪತ್ರಕರ್ತ ವೈಜನಾಥ ಹಿರೇಮಠ, ಯುವ ವಕೀಲ ನಾಗರಾಜ ಬಿರನೂರ… ಅವರು, ಕು.ಸೌಜನ್ಯಾಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ದಾಳಿಗೆ ಹೊರಟ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸಮೀರ್ ಎಂಡಿ, ಸಂತೋಷ ಶೆಟ್ಟಿ, ಜಯಂತ್ ಟಿ., ಅಯಜ್ ಅಂಚನ್ ಅವರುಗಳು ಸುಳ್ಳು ಷಡ್ಯಂತ್ರ ರೂಪಿಸಿ, ಅಪಪ್ರಚಾರ ಮಾಡುತ್ತಿರುವುದು ಯಾಕೇ? ಇವರುಗಳಿಗೆ ಹಿಂದೆ ಪ್ರಚೋಧನೆ ನೀಡುತ್ತಿರುವುದು ಯಾರು?, ಈ ತಂಡಕ್ಕೆ ಹಣಕಾಸಿನ ನೆರವು ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಸೂಕ್ತ ನಡೆಯಬೇಕೆಂದರು.
ತಮ್ಮ ಮೊಬೈಲ್ ಗಳಲ್ಲಿ ಸಾಕ್ಷಿಗಳಿವೆ ಎಂದು ಪುಂಗಿ ಬಿಟ್ಟು ಪವಿತ್ರ ಸ್ಥಳವಾದ ಧರ್ಮಸ್ಥಳ ಕ್ಷೇತ್ರದ ಹೆಸರಿಗೆ ಮಸಿ ಬಳಿಯುತ್ತಿರುವ ಇವರನ್ನು ಬಂಧಿಸಿ ವಿಚಾರಣೆ ನಡೆಸಿ ಸತ್ಯ ಬಯಲಿಗೆ ಎಳೆಯಲು ಸರ್ಕಾರ ಈಗಿರುವ ಎಸ್ ಐಟಿ ಇಲ್ಲವೇ ತನಿಖಾ ತಂಡ ರಚಿಸಬೇಕೆಂದು ಒತ್ತಾಯಿಸಿದರು.
ಅನಾಮಿಕ ವ್ಯಕ್ತಿಯೋರ್ವ ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿರುವುದು ಸ್ವಾಗತ, ಆದರೇ ಈ ತಂಡಕ್ಕೆ ಏನಾದರೂ ಸಿಕ್ಕಿದೆಯೇ? ಹಾಗಾದರೇ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ಧಿ ಹರಿಬಿಡುತ್ತಿರುವವರ ಬಗ್ಗೆ ಕ್ರಮ ಏಕಿಲ್ಲ, ಕೂಡಲೇ ಇದನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಲು ಮುಂದಾಗಬೇಕೆಂದು ಅವರುಗಳು ಸರ್ಕಾರವನ್ನು ಒತ್ತಾಯಿಸಿದರು.
ಸುಮಾರು 800 ವರ್ಷಗಳ ಇತಿಹಾಸವಿರುವ ನಿತ್ಯ ಲಕ್ಷಾಂತರ ಭಕ್ತರನ್ನು ತನ್ನ ಸನ್ನಿದಿಗೆ ಕರೆಯಿಸಿಕೊಳ್ಳುವ ಮೂಲಕ ದಕ್ಷಿಣದ ಕಾಶಿಯೆಂದೇ ಹೆಸರು ಪಡೆದಿರುವ ಶ್ರೀ ಧರ್ಮಸ್ಥಳ ಮಂಜುನಾಥ ದೇವಾಲಯಕ್ಕೂ ಮತ್ತು ಗುರುಗಳಾದ ಹೆಗ್ಗಡೆ ಅವರ ಬಗ್ಗೆ ಕಿಳ್ಳುಮಟ್ಟದ ಭಾಷೆ ಉಪಯೋಗಿಸಿ ವಿಡಿಯೋ ತುಣುಕುಗಳನ್ನು ಹರಿಬಿಡುತ್ತಿರುವವರ ನೀಚ್ ಕೆಲಸ ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದ ಅವರು, ಕೋಟ್ಯಾಂತರ ಭಕ್ತರ ಭಾವನೆಗಳಿಗೆ ದಕ್ಕೆಯಾಗುತ್ತಿದ್ದರೂ ಮೌನಕ್ಕೆ ಶರಣರಾಗಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶಾಂತಿ ಭಂಗ ಮಾಡಿ ಅಶಾಂತಿ ಹುಟ್ಟುಹಾಕುತ್ತಿದೆ ಎಂದು ದೂರಿದರು. ಕಾರಣ ಇಷ್ಟೇಲ್ಲ ರಾದ್ಧಂತಗಳಿಗೆ ಕಾರಣರಾದ ಕಲುಷಿತ ಮನಸ್ಸಿನ ಆ ವ್ಯಕ್ತಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಬೇಕೆಂದು ನಾಗರತ್ನ, ಬಿರನೂರ, ಹಿರೇಮಠ್ ಆಗ್ರಹಿಸಿದರು.