ಧರ್ಮಾಪುರ ಬ್ಲಾಕ್ ಪ್ಯಾಂಥರ್ಸ್‌ ತಂಡ ಚಾಂಪಿಯನ್

ಧರ್ಮಾಪುರ ಬ್ಲಾಕ್ ಪ್ಯಾಂಥರ್ಸ್‌ ತಂಡ ಚಾಂಪಿಯನ್
Published on

ಹುಣಸೂರು: ತಾಲೂಕಿನ ಧರ್ಮಾಪುರ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಧರ್ಮಾಪುರ ಪ್ರೀಮಿಯರ್ ಲೀಗ್(ಡಿಪಿಎಲ್)-2 ಸೀಸನ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯದಲ್ಲಿ ಧರ್ಮಾಪುರ ಬ್ಲಾಕ್ ಪ್ಯಾಂಥರ್ಸ್‌ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

6 ಓವರ್‌ಗಳ ಪಂದ್ಯದಲ್ಲಿ ಗವೀಗೌಡ ಮಾಲಿಕತ್ವದ ಧರ್ಮಾಪುರ ಬ್ಲಾಕ್ ಪ್ಯಾಂಥರ್ಸ್‌ ತಂಡ, ಮಂಜು ಪೊಲೀಸ್ ಮಾಲಿಕತ್ವದ ಭಗತ್ ಸಿಂಗ್ ಕ್ರಿಕೆಟರ್ಸ್ ತಂಡದ ವಿರುದ್ಧ 12ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿ ಡಿಪಿಎಲ್ 2ನೇ ಆವೃತ್ತಿಯ ಚಾಂಪಿಯನ್ನಾಗಿ ಹೊರಹೊಮ್ಮಿತು. ಶಾಸಕ ಜಿ.ಡಿ.ಹರೀಶ್‌ಗೌಡ ಪ್ರಾಯೋಜಕತ್ವದ 30ಸಾವಿರ ರೂ. ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.

ರನ್ನರ್ ಅಪ್ ತಂಡಕ್ಕೆ ಮಾಜಿ ಶಾಸಕ ಮಂಜುನಾಥ್ ಪ್ರಾಯೋಜಕತ್ವದಲ್ಲಿ 20ಸಾವಿರ ರೂ.ನಗದು ಮತ್ತು ಟ್ರೋಫಿ ನೀಡಲಾಯಿತು. 3ನೇ ಬಹುಮಾನವನ್ನು ಇಂಜಿನಿಯರ್ ಚನ್ನಕೇಶವ ಹಾಗೂ ಕೆಂಡಗಣ್ಣಸ್ವಾಮಿ ಮಾಲಿಕತ್ವದ ಧರ್ಮಾಪುರ ಹಂಟರ್ಸ್ ತಂಡವು ಪಡೆಯಿತು. ಜಿ.ಪಂ.ಮಾಜಿ ಸದಸ್ಯ ಡಿ.ಕೆ.ಕುನ್ನೇಗೌಡರ ಪ್ರಾಯೋಜಕತ್ವದಲ್ಲಿ 10ಸಾವಿರ ರೂ. ನಗದು ಮತ್ತು ಟ್ರೋಫಿಯನ್ನು ನೀಡಲಾಯಿತು.

ಮ್ಯಾನ್ ಆಫ್ ದಿ ಮ್ಯಾಚ್, ಬೆಸ್ಟ್ ಬ್ಯಾಟ್ಸ್‌ಮನ್ ಆಗಿ ಪುನೀತ್ ಕುಮಾರ್, ಬೆಸ್ಟ್ ಬೌಲರ್ ಆಗಿ ಮಾರುತಿ ಹಾಗೂ ಸರಣಿ ಶ್ರೇಷ್ಠರಾಗಿ ರವಿ ಮತ್ತು ನವೀನ್ ಬಹುಮಾನಗಳನ್ನು ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಮುಖಂಡ ಡಿ.ಕೆ.ಕುನ್ನೇಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟಗಳ ಆಯೋಜನೆಯಿಂದ, ಕ್ರೀಡಾ ಪ್ರತಿಭೆ ಅನಾವರಣಗೊಳ್ಳುತ್ತವೆ ಎಂದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮಾತನಾಡಿ, ಕ್ರೀಡೆಯು ಯುವಕರಲ್ಲಿ ಉತ್ಸಾಹ ತುಂಬಲು ಸಹಕಾರಿಯಾಗಿದ್ದು, ಇದರಿಂದ ಸಾಮರಸ್ಯ ಬೆಳಸಿಕೊಂಡು ಯುವಶಕ್ತಿಯೂ ಒಗ್ಗಟ್ಟಿನಿಂದ ಸತ್ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.

ಡಿವೈಸಿ, ರನ್ನ ದಿ ಲಯನ್, ಧರ್ಮಾಪುರ ಕಿಂಗ್ ಫೈಟರ್ಸ್ ತಂಡದ ಮಾಲೀಕ ನವೀನ್ ಗೌಡ, ನಾಗರಾಜ್, ಈಶ್ವರ್ ಹಾಗೂ ಆಯೋಜಕ ಶಿವು, ಮಹದೇವ್, ಕೃಷ್ಣ, ಮಂಜು, ಸಿದ್ದಾರ್ಥ್, ಸ್ವಾಮಿ, ಕೆಂಡಗಣ್ಣ, ಮಲ್ಲೇಶ್, ರಮೇಶ್, ನಿಂಗರಾಜ್, ವಿಶ್ವ, ಶಾಮಣ್ಣ, ಮಹೇಶ್, ಮಹದೇವ್ ಡಿ ಪಿ, ತರಿಕಲ್ ಮಂಜು, ನಾರಾಯಣ್ ಗೌಡ, ಸ್ವಾಮಿಗೌಡ, ಗವಿನಾಯ್ಕ, ಕಾರ್ತಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net