ಯಕ್ಷಗಾನ ಕ್ಷೇತ್ರಕ್ಕೆ ಧಾರೇಶ್ವರರ ಕೊಡುಗೆ ಅನನ್ಯ

kota (1)
Published on

ಕೋಟ: ಯಕ್ಷಗಾನ ಕ್ಷೇತ್ರಕ್ಕೆ ಸುಬ್ರಹ್ಮಣ್ಯ ಧಾರೇಶ್ವರರ ಕೊಡುಗೆ ಅಪಾರವಾದ್ದು ಅಂತಹ ಮಹಾನ್ ಚೇತನರ ಹೆಸರನ್ನು ಚಿರಸ್ಥಾಯಿಯಾಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪಾರಂಪಳ್ಳಿ ರವೀಂದ್ರ ಐತಾಳ್ ನುಡಿದರು.

ಗುರುವಾರ ಗುಂಡ್ಮಿಯಲ್ಲಿ ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರದ ವತಿಯಿಂದ ನಡೆದ ಯಕ್ಷ ಸಪ್ತೋತ್ಸವದ ಆರನೇ ದಿನದಂದು ಭಾಗವತ ದಿ.ಸುಬ್ರಹ್ಮಣ್ಯ ಧಾರೇಶ್ವರ ಪ್ರಶಸ್ತಿ ಪ್ರದಾನ ಸವಾರಂಭದಲ್ಲಿ ಸಂಸ್ಮರಣಾ ನುಡಿಗಳನ್ನಾಡಿದರು.

ತೆಂಕುತಿಟ್ಟಿನ ಭಾಗವತ ಪೆರ್ಲ ಸತ್ಯನಾರಾಯಣ ಪುಣಿಂಚಿತ್ತಾಯ ಅವರಿಗೆ ಸುಬ್ರಹ್ಮಣ್ಯ ಧಾರೇಶ್ವರ ಪ್ರಶಸ್ತಿ ಪ್ರದಾನಿಸಲಾಯಿತು.

ಪತ್ರಕರ್ತ ರವೀಂದ್ರ ಕೋಟ ಅಭಿನಂದನಾ ನುಡಿಗಳನ್ನಾಡಿದರು. ಕಲಾಕೇಂದ್ರದ ಯಕ್ಷಗುರು ಸದಾನಂದ ಐತಾಳ್ ಅಧ್ಯಕ್ಷತೆ ವಹಿಸಿದ್ದರು.

ಅಜಪುರ ಕರ್ನಾಟಕ ಯಕ್ಷಗಾನ ಸಂ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಗೀತಾ ಫೌಂಡೇಶನ್ ಮುಖ್ಯಸ್ಥ ಶಂಕರ್ ಐತಾಳ್, ಯಕ್ಷ ವಿಮರ್ಶಕ ಆನಂದರಾಮ ಉಪಾಧ್ಯಾಯ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿವಾ ಉಪಸ್ಥಿತರಿದ್ದರು.

ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ್ ಹೆಬ್ಬಾರ್ ಸ್ವಾಗತಿಸಿದರು. ಸುಮನಾ ಹೇರ್ಳೆ ನಿರೂಪಿಸಿದರು. ರಾಮಚಂದ್ರ ಐತಾಳ್ ವಂದಿಸಿದರು. ಸೀತಾರಾಮ ಸೋಮಯಾಜಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net