ಶ್ರೀಗಣೇಶೋತ್ಸವ ಸಂಗೀತ ಸಂಭ್ರಮ

ಕಲಾವಿದರಿಂದ ಫ್ಯೂಷನ್ ಬ್ಯಾಂಡ್ ಮೂಲಕ ವಿವಿಧ ರಾಗ
ganesha music
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಗಣೇಶೋತ್ಸವ ನಿಮಿತ್ತ ಮಕ್ಕಳು ಸಂಗೀತ ಸುಧೆ ಹರಿಸಿದರು.
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದ ಶ್ರೀವೀರಸೋಮೇಶ್ವರ ನಿಲಯದ ಸಂಸ್ಕೃತಿ ಅಟ್ಟದಲ್ಲಿ ಗಣೇಶೋತ್ಸವ ನಿಮಿತ್ತ ಇತ್ತೀಚೆಗೆ ಸಂಗೀತ ಸಂಭ್ರಮ ಏರ್ಪಡಿಸಲಾಗಿತ್ತು.

ನಾದ ಹಿಂದೂಸ್ತಾನಿ ಸಂಗೀತ ಕಲಾವಿದರ ವೇದಿಕೆ, ವಿವೇಕ ಮ್ಯೂಸಿಕ್ ಅಕಾಡೆಮಿ ಮತ್ತು ಕೇಶ್ವಾಪುರದ ಜೀವಿ ಸ್ವರಾಲಯದ ಕಲಿಕಾ ಮಕ್ಕಳಿಂದ ಗಣೇಶ ಸ್ತುತಿ ಮತ್ತು ಶಾಸ್ತ್ರೀಯ ಸಂಗೀತ ಸುಧೆ ಹರಿಯಿತು.

ನಾದ ಹಿಂದೂಸ್ತಾನಿ ಸಂಗೀತ ಕಲಾವಿದರ ವೇದಿಕೆ ತಂಡದ ಕಲಾವಿದರಿಂದ ಫ್ಯೂಷನ್ ಬ್ಯಾಂಡ್ ಮೂಲಕ ವಿವಿಧ ರಾಗದ ಹಾಡುಗಳು ಪ್ರದರ್ಶನಗೊಂಡವು.

ವಿಶ್ವೇಶ್ವರಯ್ಯ ಚೌಕಿಮಠ ಅವರ ಕೊಳಲು ವಾದನವು ಕೇಳುಗರನ್ನು ಮಂತ್ರ ಮುಗ್ಧಗೊಳಿಸಿತು. ಡಾ. ನಾಗಲಿಂಗ ಮುರಗಿ ತಬಲಾ, ಪ್ರೇಮಕೃಷ್ಣ ಮೇಟಿ ಕೀಬೋರ್ಡ್, ಶಿವಕುಮಾರ ಹಿರೇಮಠ ಹಾರ್ಮೋನಿಯಂ, ಶಿವಕುಮಾರ ಸ್ವಾಮಿ ಹಿರೇಮಠ ಕ್ಲಾಪ್ ಬಾಕ್ಸ್, ರಾಜಾರಾಮ ವೈದ್ಯ ತಾಳ ಸಾಥ್ ನೀಡಿದರು.

ಜೀವಿ ಕಲಾ ಬಳಗದ ಅಧ್ಯಕ್ಷ ಗದಿಗೆಯ್ಯ ಹಿರೇಮಠ, ಧಾರವಾಡ ಜಿಲ್ಲಾ ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ ಡಾ. ಎಚ್.ಎಚ್. ನದಾಫ್, ಕಲಾವಿದರಾದ ಸುನಿಲ ಪತ್ರಿ, ಶಿವಣ್ಣ ಬೆಂಗೇರಿ, ಗುರು ಹಿರೇಮಠ, ರವಿ ಬೆಂಚನಮರಡಿ, ಹರ್ಷಾ ಕವಲೂರ, ವೀಣಾ ನಶ್ವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net