ಯೋಗ ಜಾಗೃತಿ (Yoga walkathan) ವಾಕಥಾನ್

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ (Yoga walkathan) ಅಂಗವಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದ ಆವರಣದಲ್ಲಿ ಶನಿವಾರ ಯೋಗ ಜಾಗೃತಿ ವಾಕ್​ಥಾನ್ ನಡೆಯಿತು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ (Yoga walkathan) ಅಂಗವಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದ ಆವರಣದಲ್ಲಿ ಶನಿವಾರ ಯೋಗ ಜಾಗೃತಿ ವಾಕ್​ಥಾನ್ ನಡೆಯಿತು.
Published on
ಹುಬ್ಬಳ್ಳಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ (Yoga walkathan)ಅಂಗವಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದ ಆವರಣದಲ್ಲಿ ಶ್ರೀ ಸಿದ್ಧಾರೂಢ ಯೋಗ ಪರಿವಾರ ಕೇಂದ್ರ ಹಾಗೂ ಅರೂಢ ಯೋಗ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಯೋಗ ಜಾಗೃತಿ ವಾಕ್​ಥಾನ್ ನಡೆಯಿತು
ಯೋಗದ ಮಹತ್ವ, ಆರೋಗ್ಯಕರ ಜೀವನಶೈಲಿ, ಮಾನಸಿಕ ನೆಮ್ಮದಿ, ದೈಹಿಕ ಸದೃಢತೆ ಹಾಗೂ ಸಮಗ್ರ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಾಕಥಾನ್ ಆಯೋಜಿಸಲಾಗಿತ್ತು. ಯೋಗ ಜಾಗೃತಿ ಸಂದೇಶಗಳಿರುವ ಬ್ಯಾನರ್​ಗಳು ಹಾಗೂ ಫಲಕಗಳನ್ನು ಹಿಡಿದ ಸಾರ್ವಜನಿಕರು ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದರು.
ಜಮಖಂಡಿಯ ಶ್ರೀ ರುದ್ರಾವಧೂತ ಮಠದ ಶ್ರೀ ಸಹಜಾನಂದ ಅವಧೂತರು ಆಶೀರ್ವಚನ ನೀಡಿ ಯೋಗವು ಕೇವಲ ವ್ಯಾಯಾಮವಲ್ಲದೆ ದೈಹಿಕ ಆರೋಗ್ಯ, ಮಾನಸಿಕ ಸಮತೋಲನ, ಆತ್ಮಶಾಂತಿ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ದಾರಿಯಾಗಿರುವ ಸಮಗ್ರ ಜೀವನ ಪದ್ಧತಿಯಾಗಿದೆ ಎಂದು ತಿಳಿಸಿದರು.
ಯೋಗ ಸಾಧಕರು, ಭಕ್ತರು, ಹಿರಿಯ ನಾಗರಿಕರು, ಮಹಿಳೆಯರು, ಯುವಕರು, ಸಮಾಜಸೇವಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಜೂ. 21ರಂದು ಬೆಳಗ್ಗೆ 6.30ರಿಂದ 8.30 ಗಂಟೆಯ ವರೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಮೂಹಿಕ ಯೋಗಾಭ್ಯಾಸ, ಯೋಗದಾಸೋಹ ಹಾಗೂ ಮಹಾಪ್ರಸಾದ ಕಾರ್ಯಕ್ರಮಗಳು ಜರುಗಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net