ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಪ್ರವೇಶಿಸುವ ಬೈಪಾಸ್ ಸೇತುವೆ ಬಳಿ ಪೈಪ್ಲೈನ್ ಒಡೆದು ಹೋಗಿರುವ ಪರಿಣಾಮ ನೀರು ರಭಸದಿಂದ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇದನ್ನು ನೋಡಿದರೆ ನಗರದಲ್ಲಿ ಎಲ್ಲಿಯೂ ನೀರಿನ ಕೊರತೆ ಇಲ್ಲ ಅಥವಾ ನೀರು ಪೂರೈಕೆ ಸಮೃದ್ಧವಾಗಿದೆ ಎಂದು ಆಡಳಿತ ವರ್ಗ ಭಾವಿಸಿದಂತಿದೆ. ಕೊಳವೆ ಮಾರ್ಗ ದುರಸ್ತಿ ಮಾಡುವ ಕನಿಷ್ಠ ಪ್ರಯತ್ನ ನಡೆದಿಲ್ಲ. ಸತತ ನೀರು ಹರಿದು ರಸ್ತೆಗಳು ಹದಗೆಟ್ಟಿವೆ. ಅಕ್ಕ ಪಕ್ಕದ ತಗ್ಗು ಪ್ರದೇಶ, ಹೊಲಗಳಲ್ಲಿ ನೀರು ಸಂಗ್ರಹವಾಗಿದೆ. ವಾಹನಗಳ ಓಡಾಟದಿಂದ ಪರಿಸ್ಥಿತಿ ಇನ್ನಷ್ಟು ಹಾಳಾಗಿದೆ.