ಕಾಯಂಗೊಂಡ 3 ರೈಲುಗಳ (Rail Regularise)ಸಂಚಾರಕ್ಕೆ ಚಾಲನೆ

ಕಾಯಂಗೊಂಡ (Rail Regularise) ಮೂರು ನಿತ್ಯ ರೈಲು ಸಂಚಾರ ಸೇವೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ಸೋಮವಾರ ಸಂಜೆ ಚಾಲನೆ ನೀಡಿದರು.
ಕಾಯಂಗೊಂಡ (Rail Regularise) ಮೂರು ನಿತ್ಯ ರೈಲು ಸಂಚಾರ ಸೇವೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ಸೋಮವಾರ ಸಂಜೆ ಚಾಲನೆ ನೀಡಿದರು.
Published on
ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ (Rail Regularise)ಮೂರು ವಿಶೇಷ ರೈಲುಗಳ ಸಂಚಾರವನ್ನು ಕಾಯಂಗೊಳಿಸಲಾಗಿದ್ದು, ಅವುಗಳ ನಿತ್ಯ ಸಂಚಾರ ಸೇವೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ಸೋಮವಾರ ಸಂಜೆ ಚಾಲನೆ ನೀಡಿದರು.
ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ರೈಲು (ಸಂಖ್ಯೆ 56919) ಬೆಳಗ್ಗೆ 6.35ಕ್ಕೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 12.35ಕ್ಕೆ ವಿಜಯಪುರ ತಲುಪಲಿದೆ. ವಿಜಯಪುರ-ಹುಬ್ಬಳ್ಳಿ ಪ್ಯಾಸೆಂಜರ್ ರೈಲು (ಸಂಖ್ಯೆ 56920) ಮಧ್ಯಾಹ್ನ 12ಕ್ಕೆ ವಿಜಯಪುರದಿಂದ ಹೊರಟು, ಸಂಜೆ 6 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.
ಹುಬ್ಬಳ್ಳಿ-ವಿಜಯಪುರ ಮೇಮು ರೈಲು (ಸಂಖ್ಯೆ 66501) ಸಂಜೆ 4.45ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 10.10ಕ್ಕೆ ವಿಜಯಪುರ ತಲುಪಲಿದೆ. ವಿಜಯಪುರ-ಹುಬ್ಬಳ್ಳಿ ಮೇಮು ರೈಲು (ಸಂಖ್ಯೆ 66502) ಬೆಳಗ್ಗೆ 5.45ಕ್ಕೆ ವಿಜಯಪುರದಿಂದ ಹೊರಟು, ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.
ವಾರಕ್ಕೊಮ್ಮೆ ಸಂಚರಿಸುತ್ತಿದ್ದ ಹುಬ್ಬಳ್ಳಿ-ಯೋಗ ನಗರಿ ಹೃಷಿಕೇಶ ವಿಶೇಷ ರೈಲು ಮೇ 12ರಿಂದ ಪ್ರತಿನಿತ್ಯ ಸಂಚರಿಸಲಿದೆ. ಸಂಜೆ 7.45ಕ್ಕೆ ಹುಬ್ಬಳ್ಳಿಯಿಂದ ಈ ರೈಲು ಹೊರಟು, ಒಟ್ಟು 51 ಗಂಟೆ 45 ನಿಮಿಷ ಪ್ರಯಾಣದ ಬಳಿಕ ಯೋಗ ನಗರಿ ಹೃಷಿಕೇಶಕ್ಕೆ ತಲುಪಲಿದೆ.
ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜೋಶಿ, ನೈಋತ್ಯ ರೈಲ್ವೆಯ ಮೂರು ಪ್ರಮುಖ ವಿಶೇಷ ರೈಲುಗಳನ್ನು ಇಂದಿನಿಂದ ’ನಿಯಮಿತ ಸೇವೆ’ ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ಹುಬ್ಬಳ್ಳಿ, ಗದಗ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ನಿತ್ಯ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net