ಗಿಡಗಳನ್ನು ಬೆಳೆಸುವ(plantaing tree) ಜವಾಬ್ದಾರಿ ತೆಗೆದುಕೊಳ್ಳಿ

ಹುಬ್ಬಳ್ಳಿಯ ಸರ್ಕಾರಿ (plantaing tree)ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ (ನಂ.1)ಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು. ಜಯತೀರ್ಥ ಕಟ್ಟಿ, ವೆಂಕಟೇಶ ಕಾಟವೆ, ತೋಟಪ್ಪ ನಿಡಗುಂದಿ, ವಿ.ಡಿ. ಕಾನಡೆ , ರಶ್ಮಿ ಭಾವಿಕಟ್ಟಿ, ಮೇಘರಾಜ ಕೆರೂರ, ಆರ್. ಬಿ.ಬಿದರಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Published on
ಹುಬ್ಬಳ್ಳಿ: ಸರ್ಕಾರಿ ಮಾದರಿ ಕನ್ನಡ (plantaing tree) ಮತ್ತು ಆಂಗ್ಲ ಮಾಧ್ಯಮ ಶಾಲೆ (ನಂ.1)ಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಉತ್ಸಾಹದಿಂದ ಸಸಿಗಳನ್ನು ನೆಟ್ಟು ನೀರು ಹಾಯಿಸುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತುಕೊಂಡರು.
ಬಿಜೆಪಿ ಯುವ ಮುಖಂಡ ವೆಂಕಟೇಶ ಕಾಟವೆ ಮಾತನಾಡಿ, ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಟ್ಟು ಅದನ್ನು ಬೆಳೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಹಸಿರು ಪರಿಸರವೇ ಆರೋಗ್ಯಕರ ಭವಿಷ್ಯದ ಮೂಲ. ಗಿಡಗಳು ನಮ್ಮ ಜೀವನದ ಉಸಿರಾಗಿವೆ ಎಂದು ಅಭಿಪ್ರಾಯಪಟ್ಟರು.
ಪ್ರದಾನಿ ನರೇಂದ್ರ ಮೋದಿ ಅವರು ನೀಡಿರುವ ಏಕ್ ಪೇಡ್ ಮಾ ಕೆ ನಾಮ ಎಂಬ ಮಹತ್ವದ ಅಭಿಯಾನವು ಪರಿಸರ ಜಾಗೃತಿಗೆ ಹೊಸ ದಿಕ್ಕು ನೀಡಿದೆ. ತಾಯಿ ಹೆಸರಿನಲ್ಲಿ ಒಂದು ಗಿಡ ನೆಡುವ ಈ ಅಭಿಯಾನವು ಭಾವನಾತ್ಮಕ ಹಾಗೂ ಪರಿಸರ ಪರವಾದ ಅತ್ಯಂತ ಶಕ್ತಿಯುತ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದೆ ಎಂದು ತಿಳಿಸಿದರು.
ಧಾರವಾಡ ವಿಭಾಗೀಯ ಬಿಜೆಪಿ ಪ್ರಭಾರಿ ಜಯತೀರ್ಥ ಕಟ್ಟಿ, ತೋಟಪ್ಪ ನಿಡಗುಂದಿ, ವಿ.ಡಿ. ಕಾನಡೆ , ಎಸ್​ಡಿಎಂಸಿ ಅಧ್ಯಕ್ಷೆ ರಶ್ಮಿ ಭಾವಿಕಟ್ಟಿ, ಮೇಘರಾಜ ಕೆರೂರ, ವಿಜಯ ಜಿಂಗಾಡೆ, ಶಕೀಲಾ ಗ್ಲೇಡಿಸ್, ಎಲ್.ಬಿ. ಚೂಳರೆ, ಆರ್. ಬಿ.ಬಿದರಿ ಸೇರಿದಂತೆ ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net