ಕನಿಷ್ಠ ಪಿಂಚಣಿ (pension) 7500 ರೂ.ಗೆ ಹೆಚ್ಚಿಸಿ

ಕನಿಷ್ಠ ಮಾಸಿಕ ಪಿಂಚಣಿಯನ್ನು (pension)  7500 ರೂ. ಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಇಪಿಎಸ್-95 ಪಿಂಚಣಿದಾರರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹುಬ್ಬಳ್ಳಿ ಕಚೇರಿಗೆ ಶನಿವಾರ ಆಗಮಿಸಿ ಮನವಿ ಸಲ್ಲಿಸಿದರು.
ಕನಿಷ್ಠ ಮಾಸಿಕ ಪಿಂಚಣಿಯನ್ನು (pension) 7500 ರೂ. ಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಇಪಿಎಸ್-95 ಪಿಂಚಣಿದಾರರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹುಬ್ಬಳ್ಳಿ ಕಚೇರಿಗೆ ಶನಿವಾರ ಆಗಮಿಸಿ ಮನವಿ ಸಲ್ಲಿಸಿದರು.
Published on
ಹುಬ್ಬಳ್ಳಿ: ಕನಿಷ್ಠ ಮಾಸಿಕ (pension) ಪಿಂಚಣಿಯನ್ನು 7500 ರೂ. ಗೆ ಹೆಚ್ಚಿಸಬೇಕೆಂದು ಇಪಿಎಸ್-95 ಪಿಂಚಣಿದಾರರು ಆಗ್ರಹಿಸಿದ್ದಾರೆ.
ಇಲ್ಲಿಯ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕಚೇರಿಗೆ ಇಪಿಎಸ್ 95 ರಾಷ್ಟ್ರೀಯ ಹೋರಾಟ ಸಮಿತಿ ನೇತೃತ್ವದಲ್ಲಿ ಶನಿವಾರ ಆಗಮಿಸಿದ ಪಿಂಚಣಿದಾರರು ಮನವಿ ಸಲ್ಲಿಸಿದರು.
ಇಪಿಎಸ್-95 ಪಿಂಚಣಿದಾರರು ದೇಶ ವ್ಯಾಪಿ ಸರಾಸರಿಯಾಗಿ ಮಾಸಿಕ 1170 ರೂ. ಪಿಂಚಣಿ ಪಡೆಯುತ್ತಿದ್ದಾರೆ. ಇಂದಿನ ದುಬಾರಿ ಕಾಲದಲ್ಲಿ ಅತ್ಯಂತ ಕಡಿಮೆಯಾಗಿದೆ. ಕಡಿಮೆ ಪಿಂಚಣಿ, ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದೆ ದೇಶದಲ್ಲಿ ನಿತ್ಯ 200-250 ಇಪಿಎಸ್ ಪಿಂಚಣಿದಾರರು ಮರಣ ಹೊಂದುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮುಂದಿನ ಸಚಿವ ಸಂಪುಟ ಸಭೆಯಲ್ಲಿ 7500 ರೂ. ಮಾಸಿಕ ಪಿಂಚಣಿ ಜತೆಗೆ 3000 ರೂ. ತುಟ್ಟಿಭತ್ಯೆಗೆ ಅನುಮೋದನೆ ನೀಡಬೇಕು. ಪಿಂಚಣಿದಾರರಿಗೆ ಹಾಗೂ ಅವಲಂಬಿತರಿಗೆ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಇಪಿಎಸ್-95 ಸ್ಕೀಮ್ೆ ಒಳಗೊಳ್ಳದ ನಿವೃತ್ತರಿಗೆ ಮಾಸಿಕ ಕನಿಷ್ಠ 5000 ರೂ. ಪಿಂಚಣಿ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಸಂಘಟನೆಯ ಪ್ರಾದೇಶಿಕ ಸಂಯೋಜಕ ಚಂದ್ರಕಾಂತ ಕೆರೂರ, ಹು-ಧಾ ಅಧ್ಯಕ್ಷ ನಾಗೇಂದ್ರರಾವ್ ಬೇವಿನಕಟ್ಟಿ, ಶಿವನಗೌಡ ಪಾಟೀಲ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net