ಸಂವಿಧಾನದ (May mela)ಆಶಯ ಉಳಿಸುವ ಕೆಲಸವಾಗಲಿ

ಹುಬ್ಬಳ್ಳಿಯಲ್ಲಿ ಎರಡು ದಿನಗಳ (May mela) ಮೇ ಸಾಹಿತ್ಯ ಮೇಳಕ್ಕೆ ಶನಿವಾರ ಚಾಲನೆ ನೀಡಲಾಯಿತು. ಪಾಣಿ ಕರ್ನಲ್, ಕೆ.ನೀಲಾ, ಸನತಕುಮಾರ ಬೆಳಗಲಿ, ಡಾ. ಲಿಂಗರಾಜ ಅಂಗಡಿ, ಅನ್ವರ್ ಮುಧೋಳ, ಇತರರು ಇದ್ದರು.
ಹುಬ್ಬಳ್ಳಿಯಲ್ಲಿ ಎರಡು ದಿನಗಳ (May mela) ಮೇ ಸಾಹಿತ್ಯ ಮೇಳಕ್ಕೆ ಶನಿವಾರ ಚಾಲನೆ ನೀಡಲಾಯಿತು. ಪಾಣಿ ಕರ್ನಲ್, ಕೆ.ನೀಲಾ, ಸನತಕುಮಾರ ಬೆಳಗಲಿ, ಡಾ. ಲಿಂಗರಾಜ ಅಂಗಡಿ, ಅನ್ವರ್ ಮುಧೋಳ, ಇತರರು ಇದ್ದರು.
Published on
ಹುಬ್ಬಳ್ಳಿ: ಭಾರತವು (May mela) 144 ಕೋಟಿ ಜನರ ಸ್ವತ್ತು. ಇದು ಕೆಲವೇ ಜನರಿಗೆ ಸೀಮಿತವಾಗಬಾರದು. ಧರ್ಮ, ಜಾತಿ, ಭಾಷೆ ಹೆಸರಲ್ಲಿ ದೇಶ ಛಿದ್ರವಾಗಲು ಬಿಡಬಾರದು. ಸಂವಿಧಾನದ ಆಶಯಗಳನ್ನು ಉಳಿಸುವುದು ಪ್ರತಿಯೊಬ್ಬ ಪ್ರಗತಿಶೀಲರ ಕರ್ತವ್ಯವಾಗಲಿ ಎಂದು ತೆಲುಗು ಸಾಹಿತಿ ಪಾಣಿ ಕರ್ನಲ್ ಹೇಳಿದರು.
ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಸಾಂವಿಧಾನಿಕ ಪ್ರಜಾಸತ್ತೆಯ ಮೇಲಿನ ದಾಳಿ: ಚಹರೆ ಮತ್ತು ಹೊರ ದಾರಿಗಳು ಎಂಬ ಶೀರ್ಷಿಕೆಯ ಎರಡು ದಿನಗಳ ಮೇ ಸಾಹಿತ್ಯ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ದೇಶದಲ್ಲಿ ಅರಾಜಕತೆ ಸೃಷ್ಟಿಸಲಾಗುತ್ತಿರುವ ಈ ದಿನಗಳಲ್ಲಿ ಪ್ರಜೆಗಳೇ ಚರಿತ್ರೆ ನಿರ್ವಿುಸಬೇಕು ಎಂದು ಕರೆ ನೀಡಿದರು.
ಎಸ್​ಐಆರ್ ಹೆಸರಿನಲ್ಲಿ ಅನ್ಯ ಧರ್ಮದ, ಅನ್ಯ ವಿಚಾರಧಾರೆಯ ಮತದಾರರನ್ನು ಮತದಾನದಿಂದ ಹೊರಗಿಡಲಾಗುತ್ತಿದೆ. ಇದರ ಕುರುಹುಗಳು ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಗೋಚರಿಸಿವೆ. ದೇಶದ ಪ್ರಜಾಪ್ರಭುತ್ವವನ್ನು ಮೋದಿ ಪ್ರಭುತ್ವ ಆವರಿಸಿಕೊಳ್ಳುತ್ತಿದೆ ಎಂದು ಅತಂಕ ವ್ಯಕ್ತಪಡಿಸಿದರು.
ಸಮಾವೇಶಕ್ಕೆ ವಿರೋಧ
ದಿಕ್ಸೂಚಿ ಭಾಷಣ ಮಾಡಿದ ಸಿಪಿಎಂ ನಾಯಕಿ ಕೆ. ನೀಲಾ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಆಯೋಜಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ನಮ್ಮ ವಿರೋಧವಿದೆ. ಬಸವೇಶ್ವರರು ಪೌರೋಹಿತ್ಯವನ್ನು ವಿರೋಧಿಸಿದ್ದರು. ಇದನ್ನು ಹಿಂದುಗಳು ಒಪ್ಪುತ್ತಾರೆಯೇ ? ಹಿಂದೂ ಶಬ್ದಕ್ಕೂ ವಚನಕಾರರಿಗೂ ಏನು ಸಂಬಂಧ ? ಬಸವಾದಿ ಶರಣರ ಸಮಾವೇಶ ಹಾಗೂ ಹಿಂದೂ ಸಮಾವೇಶ ಪ್ರತ್ಯೇಕವಾಗಿ ನಡೆಸಿದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದರು.
ಉದ್ಘಾಟನೆ ನೆರವೇರಿಸಿದ ಪತ್ರಕರ್ತ ಸನತ್​ಕುಮಾರ ಬೆಳಗಲಿ, ಸಮ ಸಮಾಜ ನಿರ್ವಣದ ವಿಚಾರಧಾರೆ ಉಳ್ಳವರು ಮೇ ಸಾಹಿತ್ಯ ಮೇಳ ಆಯೋಜಿಸುತ್ತ ಬಂದಿದ್ದು ಶ್ಲಾಘನೀಯ. ಇದು ದೇಶಕ್ಕೆ ಮಾದರಿಯಾಗಿದ್ದು, ರಾಷ್ಟ್ರ ಮಟ್ಟದಲ್ಲಿ ನಡೆಯಬೇಕು ಎಂದರು.
ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಹುಡಾ ಮಾಜಿ ಅಧ್ಯಕ್ಷ ಅನ್ವರ್ ಮುಧೋಳ, ಕೆ.ಪಿ. ಸುರೇಶ, ಬೀಬಿಜಾನ್ ಮುಲ್ಲಾ, ಬಿ.ಎಸ್. ಸೊಪ್ಪಿನ, ಇತರರು ಇದ್ದರು. ಮಾಜಿ ಸಂಸದ ಐ.ಜಿ. ಸನದಿ ಸ್ವಾಗತಿಸಿದರು. ಸಾಹಿತಿ ಸುನಂದಾ ಕಡಮೆ ನಿರೂಪಿಸಿದರು. ಶರೀಫ್ ಬಿಳೆಯಲಿ ಸಂವಿಧಾನ ಪ್ರಸ್ತಾವನೆ ಓದಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net