ಮೇಯರ್ ಸ್ಥಾನಕ್ಕೆ ಚಂದ್ರಿಕಾ ಮೇಸ್ತ್ರಿ ಹಾಗೂ ದುರ್ಗಮ್ಮ ಬಿಜವಾಡ ನಡುವೆ ಪೈಪೋಟಿ ಇದೆ. ಉಪ ಮೇಯರ್ ಸ್ಥಾನದ ರೇಸ್ನಲ್ಲಿ ಅನೀತಾ ಚಳಗೇರಿ, ರತ್ನಾಬಾಯಿ ನಾಜರೆ, ಚಂದ್ರಕಲಾ ಕೊಟಬಾಗಿ ಹಾಗೂ ಸುನೀತಾ ಮಾಳವದಕರ ಇದ್ದಾರೆ. ದುರ್ಗಮ್ಮ ಬಿಜವಾಡ ಹಿಂದೆ ಉಪ ಮೇಯರ್ ಆಗಿದ್ದರು. ಈ ಕಾರಣಕ್ಕೆ ಮೇಯರ್ ಸ್ಥಾನದ ಪೈಪೋಟಿಯಲ್ಲಿ ಚಂದ್ರಿಕಾ ಮೇಸ್ತ್ರಿ ಮುಂಚೂಣಿಯಲ್ಲಿ ಪರಿಗಣಿಸಲ್ಪಡುತ್ತಾರೆ.