ಕೈಗಾರಿಕೆ-ಶೈಕ್ಷಣಿಕ (KLE MOU)ಸಹಯೋಗವನ್ನು ಬಲಪಡಿಸುವ ಉದ್ದೇಶದಿಂದ ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ-ಭಿಲಾಯ್ ಲಾಜಿಕ್ ಲ್ಯಾಬ್ಸ್ ಪ್ರೖೆವೇಟ್ ಲಿಮಿಟೆಡ್ ಒಪ್ಪಂದ ಪತ್ರಕ್ಕೆ ಸಹಿ ಹಾಕಿದವು. ಡಾ. ಅಶೋಕ ಶೆಟ್ಟರ್, ಡಾ. ಪ್ರಕಾಶ ತೆವರಿ, ಡಾ. ಬಸವರಾಜ ಅನಾಮಿ, ಪ್ರೊ. ಬಿ. ಎಲ್. ದೇಸಾಯಿ, ನಿಶಾಂತ ಕುಮಾರ್ ಇತರರು ಇದ್ದರು.
ಹುಬ್ಬಳ್ಳಿ: ಆಟೋಮೋಟಿವ್ (KLE MOU) ಸಿಸ್ಟಮ್್ಸ, ಎಂಬೆಡೆಡ್ ಇಂಜಿನಿಯರಿಂಗ್, ಫಂಕ್ಷನಲ್ ಸೇಫ್ಟಿ, ಸೆಮಿಕಂಡಕ್ಟರ್ ತಂತ್ರಜ್ಞಾನ ಹಾಗೂ ಸಿಸ್ಟಮ್ ಇಂಜಿನಿಯರಿಂಗ್ ಮುಂತಾದ ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೈಗಾರಿಕೆ-ಶೈಕ್ಷಣಿಕ ಸಹಯೋಗವನ್ನು ಬಲಪಡಿಸುವ ಉದ್ದೇಶದಿಂದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವು ಭಿಲಾಯ್ ಲಾಜಿಕ್ ಲ್ಯಾಬ್ಸ್ ಪ್ರೖೆವೇಟ್ ಲಿಮಿಟೆಡ್ ಜತೆ ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ.
ಸಹಿ ಸಮಾರಂಭವು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಡಾ. ಅಶೋಕ ಶೆಟ್ಟರ್, ಕುಲಪತಿ ಡಾ. ಪ್ರಕಾಶ ತೆವರಿ, ಕುಲ ಸಚಿವರ ಡಾ. ಬಸವರಾಜ ಅನಾಮಿ, ಕಾರ್ಯಕಾರಿ ಡೀನ್ ಪ್ರೊ. ಬಿ. ಎಲ್. ದೇಸಾಯಿ, ವಿಶ್ವವಿದ್ಯಾಲಯದ ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ನಡೆಯಿತು.
ಭಿಲಾಯ್ ಲಾಜಿಕ್ ಲ್ಯಾಬ್ಸ್ ಪ್ರೖೆವೇಟ್ ಲಿಮಿಟೆಡ್ನ ಸಿಇಒ ನಿಶಾಂತ್ ಕುಮಾರ್ ಮಾತನಾಡಿ, ಬೋಷ್, ಕಾಂಟಿನೆಂಟಲ್ ಹಾಗೂ ಎನ್ಎಕ್ಸ್ಪಿ ಯಂತಹ ಪ್ರಮುಖ ಜಾಗತಿಕ ಸಂಸ್ಥೆಗಳ ಜತೆ ನಾವು 20ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದೇವೆ. ಭವಿಷ್ಯದ ಮೊಬಿಲಿಟಿ ತಂತ್ರಜ್ಞಾನವನ್ನು ರೂಪಿಸುವಲ್ಲಿ ಫಂಕ್ಷನಲ್ ಸೇಫ್ಟಿ, ಆಟೋಮೋಟಿವ್ ಇಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ಇಂಜಿನಿಯರಿಂಗ್ ಹೆಚ್ಚು ಮಹತ್ವ ಪಡೆದಿದೆ. ಈ ಪ್ರಭಾವಶಾಲಿ ಕ್ಷೇತ್ರಗಳಲ್ಲಿ ಆಳವಾದ ತಾಂತ್ರಿಕ ಪರಿಣತಿಯನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಭಿಲಾಯ್ ಲಾಜಿಕ್ ಲ್ಯಾಬ್ಸ್ ಸಿಒಒ ಹರೀಶ ಸಾಹು ಮಾತನಾಡಿ, ಈ ಒಪ್ಪಂದವು ಅರ್ಥಪೂರ್ಣ ತಾಂತ್ರಿಕ ವೃತ್ತಿಜೀವನದ ಅಡಿಪಾಯವಾಗಿ ಪ್ರಾಯೋಗಿಕ ಸಮಸ್ಯಾ ಪರಿಹಾರ ಹಾಗೂ ಆವಿಷ್ಕಾರ ಆಧಾರಿತ ಇಂಜಿನಿಯರಿಂಗ್ನತ್ತ ಗಮನ ಹರಿಸಲು ವಿದ್ಯಾರ್ಥಿಗಳಿಗೆ ಪ್ರೇರೇಪಿಸಲಿದೆ ಎಂದರು.