ಹುಬ್ಬಳ್ಳಿಯ ಐಶ್ವರ್ಯಗೆ (Junior shooting) ಬೆಳ್ಳಿಯ ಪದಕ

ವಲ್ಡ್ ಜೂನಿಯರ್ (Junior shooting) ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಗೆದ್ದ ಹುಬ್ಬಳ್ಳಿಯ ಐಶ್ವರ್ಯ ಬಾಲೆಹೊಸೂರ ಜತೆ ರಷ್ಯಾದ ಎಸ್. ಸೋಫಿಯಾ (ಚಿನ್ನ) ಹಾಗೂ ಮಂಗೋಲಿಯಾದ ಅಮರಬಯಸಗಲನ್ ಅರಿವುಝುಯ (ಕಂಚು) ಇದ್ದಾರೆ.
ವಲ್ಡ್ ಜೂನಿಯರ್ (Junior shooting) ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಗೆದ್ದ ಹುಬ್ಬಳ್ಳಿಯ ಐಶ್ವರ್ಯ ಬಾಲೆಹೊಸೂರ ಜತೆ ರಷ್ಯಾದ ಎಸ್. ಸೋಫಿಯಾ (ಚಿನ್ನ) ಹಾಗೂ ಮಂಗೋಲಿಯಾದ ಅಮರಬಯಸಗಲನ್ ಅರಿವುಝುಯ (ಕಂಚು) ಇದ್ದಾರೆ.
Published on
ಹುಬ್ಬಳ್ಳಿ: ಜರ್ಮನಿ ಸೂಲ್​ನಲ್ಲಿ ನಡೆಯುತ್ತಿರುವ (Junior shooting) ವರ್ಲ್ಡ್ ಜೂನಿಯರ್ ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ಹುಬ್ಬಳ್ಳಿಯ ಹುಡುಗಿ ಐಶ್ವರ್ಯ ಬಾಲೆಹೊಸೂರ 50 ಮೀ. ಫ್ರೀ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ರಷ್ಯಾದ ಎಸ್. ಸೋಫಿಯಾ ಚಿನ್ನದ ಪದಕ ಪಡೆದರೆ, ಕಂಚಿನ ಪದಕವನ್ನು ಮಂಗೋಲಿಯಾದ ಅಮರಬಯಸಗಲನ್ ಅರಿವುಝುಯ ಪಡೆದರು. ಸೋಫಿಯಾ ಹಾಗೂ ಐಶ್ವರ್ಯ ತಲಾ 540 ಅಂಕಗಳನ್ನು ಸಂಪಾದಿಸಿದರು.
ಐಶ್ವರ್ಯ ಅವರು ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ತರಬೇತುದಾರ, ಮಾಜಿ ಸೈನಿಕ ರವಿಚಂದ್ರ ಬಾಲೆಹೊಸೂರ ಅವರ ಪುತ್ರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net