ಐಸಿಐ ಪದಗ್ರಹಣ (ICI Installation) ಸಮಾರಂಭ ಏ. 19ರಂದು

ಹುಬ್ಬಳ್ಳಿಯಲ್ಲಿ(ICI Installation)  ಶುಕ್ರವಾರ ಇಂಡಿಯನ್ ಕಾಂಕ್ರೀಟ್ ಇನ್​ಸ್ಟಿಟ್ಯೂಟ್​ನ ಹುಬ್ಬಳ್ಳಿ-ಧಾರವಾಡ ಸೆಂಟರ್ ಅಧ್ಯಕ್ಷ ಸುರೇಶ ಕಿರೇಸೂರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹುಬ್ಬಳ್ಳಿಯಲ್ಲಿ(ICI Installation) ಶುಕ್ರವಾರ ಇಂಡಿಯನ್ ಕಾಂಕ್ರೀಟ್ ಇನ್​ಸ್ಟಿಟ್ಯೂಟ್​ನ ಹುಬ್ಬಳ್ಳಿ-ಧಾರವಾಡ ಸೆಂಟರ್ ಅಧ್ಯಕ್ಷ ಸುರೇಶ ಕಿರೇಸೂರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on
ಹುಬ್ಬಳ್ಳಿ: ಇಂಡಿಯನ್ (ICI Installation) ಕಾಂಕ್ರೀಟ್ ಇನ್​ಸ್ಟಿಟ್ಯೂಟ್ (ಐಸಿಐ)ನ ಹುಬ್ಬಳ್ಳಿ-ಧಾರವಾಡ ಸೆಂಟರ್​ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಏ. 19ರಂದು ಸಂಜೆ 6.30ಕ್ಕೆ ಗೋಕುಲ ರಸ್ತೆ ಹೊಸೂರ ಬಳಿಯ ದಿ ಫರ್ನ್ ರೆಸಿಡೆನ್ಸಿಯಲ್ಲಿ ಆಯೋಜಿಸಲಾಗಿದೆ ಎಂದು ಸೆಂಟರ್​ನ ಅಧ್ಯಕ್ಷ ಸುರೇಶ ಕಿರೇಸೂರ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟಿ ಸ್ಟೀಲ್ಸ್ ಸಹಯೋಗದೊಂದಿಗೆ ಕಾರ್ಯಕ್ರಮ ಸಂಘಟಿಸಿದ್ದೇವೆ. ಸೆಂಟರ್​ನ ಕಾರ್ಯದರ್ಶಿಯಾಗಿ ಡಾ. ಆನಂದ ಹುಣಶ್ಯಾಳ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಜಯ ತೋಟಗೇರ, ಶ್ರೀಹರಿ ಕೆ.ಎಚ್., ಸುರೇಶ ಪಾಟೀಲ, ಉಮೇಶ ನೀಲಿ, ಡಾ. ಎಂ.ಆರ್. ಪಾಟೀಲ, ಸಂತೋಷ ಅಂಚಟಗೇರಿ, ಜಿ.ಎಸ್. ಅಂಗಡಿ ಹಾಗೂ ಡಾ. ರೂಪಾ ಎ.ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪದಗ್ರಹಣ ಸಮಾರಂಭಕ್ಕೆ ಐಸಿಐ ಅಧ್ಯಕ್ಷ ಡಾ. ವಿ. ರಾಮಚಂದ್ರ ಮುಖ್ಯಅತಿಥಿಗಳಾಗಿ, ಕೋಟಿ ಸ್ಟೀಲ್ಸ್ ಮ್ಯಾನೇಜಿಂಗ್ ಪಾರ್ಟನರ್ ರಾಹುಲ ಕೋಟಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ದೇಶದಲ್ಲಿ ಐಸಿಐನ 62 ಸೆಂಟರ್​ಗಳಿವೆ. ಹು-ಧಾ ಸೆಂಟರ್ 2004ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಉತ್ತರ ಕರ್ನಾಟಕ ವ್ಯಾಪ್ತಿಯನ್ನು ಹೊಂದಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ, ನಿರ್ಮಾಣ ವೃತ್ತಿಪರರಿಗೆ ಹೊಸ ಕಾಂಕ್ರೀಟ್ ತಂತ್ರಜ್ಞಾನ, ಕಾಂಕ್ರೀಟ್ ಬಾಳಿಕೆ, ಸ್ಥಿರತೆ ಮುಂತಾದ ವಿಷಯಗಳ ಬಗ್ಗೆ ತಿಳಿವಳಿಕೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹೊಸ ಹೊಸ ಸಂಶೋಧನೆಗಳ ಬಗ್ಗೆ ಮಾಹಿತಿ ವಿನಿಮಯ ಐಸಿಐನ ಉದ್ದೇಶವಾಗಿದೆ ಎಂದು ವಿವರಿಸಿದರು.
ಕೋಟಿ ಸ್ಟೀಲ್ಸ್​ನ ಮ್ಯಾನೇಜಿಂಗ್ ಪಾರ್ಟನರ್ ರಾಹುಲ ಕೋಟಿ ಮಾತನಾಡಿ, ಕೋಟಿ ಸ್ಟೀಲ್ಸ್ ಭಾರತದಲ್ಲಿಯೇ ಉನ್ನತ ಗುಣಮಟ್ಟದ 600ಡಿ ಗ್ರೇಡ್ ಟಿಎಂಟಿ ಕಬ್ಬಿಣದ ಬಾರ್ ಉತ್ಪಾದಿಸುವ ಕೆಲವೇ ಕೆಲವು ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯು 6 ಮಿ.ಮೀ ನಿಂದ 32 ಮಿ.ಮೀ. ವರೆಗೆ ಟಿಎಂಟಿ ಬಾರ್ ಹಾಗೂ 18ರಿಂದ 20 ಗೇಜ್ ಬಾಂಡಿಂಗ್ ವೈರ್​ಗಳನ್ನು ಉತ್ಪಾದಿಸಿ ವಿವಿಧ ನಿರ್ಮಾಣ ಅಗತ್ಯಗಳನ್ನು ಪೂರೈಸುತ್ತಿದ್ದೇವೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net