ಹುಬ್ಬಳ್ಳಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ (Fire Incident)ನಿಂದ ಬೆಂಕಿ ತಗುಲಿ ಪೀಠೋಪಕರಣ, ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್ ವಸ್ತುಗಳು, ಫುಟವೇರ್, ಬಟ್ಟೆ ಇನ್ನಿತರೆ ವಸ್ತುಗಳ ಸುಟ್ಟು ಕರಕಲಾದ ಘಟನೆ ಇಲ್ಲಿಯ ಮರಾಠಾ ಗಲ್ಲಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಸುಖಸಾಗರ ಮಾಲ್ನಲ್ಲಿ ರಮೀಜ್ ರಾಜಾ ಎಂಬುವವರಿಗೆ ಸೇರಿದ ಮೆಟ್ರೋ ಮಾರ್ಕೆಟಿಂಗ್ ಮಳಿಗೆ ಬೆಂಕಿಗೆ ಆಹುತಿಯಾಗಿದೆ. . ರಾತ್ರಿ ಮಳಿಗೆ ಬಂದ್ ಮಾಡಿಕೊಂಡು ಮನೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಮಳಿಗೆಯಲ್ಲಿ 50ಲಕ್ಷ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಬಗೆಯ ಇಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ಸಾಮಗ್ರಿಗಳಿದ್ದವು. ಬೆಂಕಿ ಹತೋಟಿಗೆ ತಂದು ಸುಮಾರು 30ಲಕ್ಷ ರೂ.ಗೂ ಹೆಚ್ಚಿನ ಸಾಮಗ್ರಿಗಳನ್ನು ಸಂರಕ್ಷಣೆ ಮಾಡಲಾಗಿದೆ. 20ಲಕ್ಷ ರೂ.ಗೂ ಹೆಚ್ಚು ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದಂತೆ ಅಗ್ನಿಶಾಮಕ ದಳ ಮತ್ತು ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.