ಹುಬ್ಬಳ್ಳಿಯ ಅಭಿಜೀತ ಬೆಂಗೇರಿ (Drugs Awareness) ಫೌಂಡೇಷನ್, ಕೆಎಲ್ಇ ಸಂಸ್ಥೆಯ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದಲ್ಲಿಆಯೋಜಿಸಿದ್ದ ಮಾದಕ ವಸ್ತುಗಳ ತಿಳಿವಳಿಕೆ ಅಭಿಯಾನದಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರನ್ನು ಸನ್ಮಾನಿಸಲಾಯಿತು.
ಮಾದಕ (Drugs Awareness) ವಸ್ತುಗಳು ವ್ಯಕ್ತಿಯ ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೇ ಶಿಕ್ಷಣ, ವೃತ್ತಿ, ಸಂಬಂಧ ಹಾಗೂ ಕನಸುಗಳನ್ನು ನಾಶ ಪಡಿಸುತ್ತದೆ. ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಕರೆ ನೀಡಿದರು.
ಹುಬ್ಬಳ್ಳಿಯ ಅಭಿಜೀತ ಬೆಂಗೇರಿ ಫೌಂಡೇಷನ್, ನಗರದ ಕೆಎಲ್ಇ ಸಂಸ್ಥೆಯ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ತಿಳಿವಳಿಕೆ ಅಭಿಯಾನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಫೌಂಡೇಷನ್ ಅಧ್ಯಕ್ಷ, ಐಪಿಎಲ್ ಅಂಪೈರ್ ಅಭಿಜೀತ ಬೆಂಗೇರಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಗಂಭೀರ ದೈಹಿಕ, ಮಾನಸಿಕ, ಶೈಕ್ಷಣಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳು ಉಂಟಾಗುತ್ತವೆ. ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ, ಸೃಜನಶೀಲತೆ ಮತ್ತು ಇತರ ರಚನಾತ್ಮಕ ಚಟುವಟಿಕೆಗಳಲ್ಲಿ ತಮ್ಮ ಸಮಯ ಮತ್ತು ಸಾಮರ್ಥ್ಯಗಳನ್ನು ಬಳಸಿಕೊಳ್ಳಬೇಕು ಎಂದರು.
ವೈದ್ಯ ಡಾ. ಸಮೀರ ಮಂಗಳವೇಢೆ ಅತಿಥಿಗಳಾಗಿದ್ದರು. ಕಾಲೇಜಿನ ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಬಾಬಾ ಭೂಸದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಸ್.ಎಲ್. ಪಾಟೀಲ ಸ್ವಾಗತಿಸಿದರು.